ADVERTISEMENT

ಕಲಬುರ್ಗಿಯಲ್ಲಿ ‌ಭಾರಿ ಮಳೆ: ಕಲ್ಯಾಣ ‌ಕರ್ನಾಟಕ ಉತ್ಸವದ ಮೇಲೆ ಕರಿನೆರಳು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 12:32 IST
Last Updated 16 ಸೆಪ್ಟೆಂಬರ್ 2020, 12:32 IST
ಕಲಬುರ್ಗಿಯ ಜೆ.ಆರ್.ಕಾಲೊನಿಯಲ್ಲಿ ಮಳೆಯಿಂದಾಗಿ ಮನೆಗಳನ್ನು ಸುತ್ತುವರೆದ ನೀರು
ಕಲಬುರ್ಗಿಯ ಜೆ.ಆರ್.ಕಾಲೊನಿಯಲ್ಲಿ ಮಳೆಯಿಂದಾಗಿ ಮನೆಗಳನ್ನು ಸುತ್ತುವರೆದ ನೀರು   

ಕಲಬುರ್ಗಿ: ನಗರದಲ್ಲಿ ಬುಧವಾರ ‌ಬೆಳಿಗ್ಗೆಯಿಂದ ಬಿರುಸಿನ ಮಳೆ ಸುರಿಯುತ್ತಿದ್ದು, ಇದೇ 17ರಂದು ನಡೆಯುವ ಕಲ್ಯಾಣ ‌ಕರ್ನಾಟಕ ಉತ್ಸವ ದಿನಾಚರಣೆ ಅಸ್ತವ್ಯಸ್ತವಾಗುವ ಸಾಧ್ಯತೆ‌ ಇದೆ.

ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಜಿಟಿ ಜಿಟಿ ಸುರಿದ ಮಳೆ ಸಂಜೆಯ ಬಳಿಕ ಬಿರುಸು ಪಡೆದುಕೊಂಡಿತು.

ಹೀಗಾಗಿ ಪ್ರಧಾನ ಕಾರ್ಯಕ್ರಮ ನಡೆಯುವ ‌ಡಿಎಆರ್ ಮೈದಾನ‌ ಜಲಾವೃತವಾಗಿದ್ದು, ಶಾಮಿಯಾನ ಹಾಕುವ ಕಾರ್ಯಕ್ಕೂ ಅಡ್ಡಿಯಾಗಿದೆ.

ADVERTISEMENT

ಇದೇ 17ರಂದು ವಿಶೇಷ ವಿಮಾನದ ಮೂಲಕ ಕಲಬುರ್ಗಿಗೆ ಬರುವ ಮುಖ್ಯಮಂತ್ರಿ ‌ಬಿ.ಎಸ್.ಯಡಿಯೂರಪ್ಪ ಅವರು ಬೆಳಿಗ್ಗೆ 9ಕ್ಕೆ ಮೈದಾನದಲ್ಲಿ ಧ್ವಜಾರೋಹಣ ‌ನೆರವೇರಿಸಲಿದ್ದಾರೆ. ಆದರೆ, ಭಾರಿ ಮಳೆಯಿಂದಾಗಿ ಮೈದಾನದಲ್ಲಿ ಸಭಿಕರಿಗೆ ಆಸನ ವ್ಯವಸ್ಥೆ ಕಲ್ಪಿಸುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ.

ಉತ್ಸವದ ಅಂಗವಾಗಿ‌ ನಗರದೆಲ್ಲೆಡೆ ಸ್ವಾಗತ ಕಮಾನುಗಳನ್ನು ಅಳವಡಿಸಲಾಗಿದೆ. ಆದರೆ, ಕಮಾನಿಗೆ ಅಳವಡಿಸಿದ ‌ಬಟ್ಟೆಗಳೆಲ್ಲ ತೊಯ್ದು ತೊಪ್ಪೆಯಾಗಿವೆ.

ಮಂಗಳವಾರ ರಾತ್ರಿಯಿಡೀ ಸುರಿದ ಮಳೆ ಬುಧವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಬಿರುಸಿನಿಂದ ಸುರಿಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.