
ಅಫಜಲಪುರ: ‘ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕಲಬುರಗಿ ವಿಭಾಗ-2ರ ವ್ಯಾಪ್ತಿಯ ಅಫಜಲಪುರ ಘಟಕದಿಂದ ಬೆಂಗಳೂರಿಗೆ ಸಿಂದಗಿ, ಮುದ್ದೆಬಿಹಾಳ, ಚಿತ್ರದುರ್ಗ ಮಾರ್ಗವಾಗಿ ಅಮೋಘವರ್ಷ ನಾನ್ ಎಸಿ ಸ್ಲೀಪರ್ ಬಸ್ ಸೇವೆಗೆ ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಎಂ.ಪಾಟೀಲ ಅವರು ಬುಧವಾರ ಚಾಲನೆ ನೀಡಿದರು.
ಕುರಿತು ಅವರು ಮಾತನಾಡಿ, ‘ಬೆಂಗಳೂರಿಗೆ ಓಡಾಡುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಬೆಂಗಳೂರಿಗೆ ಇಲ್ಲಿಂದ ದಿನಾಲು ಒಂದು ನಾನ್ ಎಸಿ ಸ್ಲೀಪರ್ ಬಸ್ ಸೇವೆ ಆರಂಭಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಬಳ್ಳಾರಿ ಜಿಲ್ಲೆಯ ಉಜ್ಜೈನಿಗೆ ಬಸ್ ಸೇವೆಯನ್ನು ಆರಂಭಿಸಲಾಗುವುದು’ ಎಂದು ತಿಳಿಸಿದರು.
ಇಲ್ಲಿನ ಬಸ್ ಡಿಪೋ ವ್ಯವಸ್ಥಾಪಕ ಅಮಿನಪ್ಪ ಬೋವಿ ಮಾಹಿತಿ ನೀಡಿ, ‘ಅಫಜಲಪುರದಿಂದ ಬೆಂಗಳೂರಿಗೆ ಸಂಜೆ 5.45ಕ್ಕೆ ಹಾಗೂ ಬೆಂಗಳೂರಿನಿಂದ ಅಫಜಲಪುರಕ್ಕೆ ರಾತ್ರಿ 8.30ಕ್ಕೆ ತಲುಪುತ್ತದೆ’ ಎಂದರು.
ತಹಶೀಲ್ದಾರ್ ಸಂಜುಕುಮಾರ ದಾಸರ್ ಮಾತನಾಡಿದರು. ಜಿಲ್ಲಾ ಸಾರಿಗೆ ಇಲಾಖೆಯ ಪ್ರಭಾರಿ ಅಧಿಕಾರಿ ಶ್ರೀದೇವಿ, ಸಿಪಿಐ ಚೆನ್ನಯ್ಯ ಹಿರೇಮಠ, ಮುಖಂಡರಾದ ಸಂಜೀವ ನಿಂಬಾಳ, ರಾಜು ಮನಮಿ, ಚಂದ್ರಶೇಖರ ಕರಜಿಗಿ, ಶರಣು ಕುಂಬಾರ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.