ADVERTISEMENT

ಕಲಬುರಗಿ: ಪಿಎಫ್‌ಐ ಘಟಕದ ಅಧ್ಯಕ್ಷ ಏಜಾಜ್ ಮನೆಯಲ್ಲಿ ₹ 14 ಲಕ್ಷ ವಶ

ಪಿಎಫ್‌ಐ ರಾಜ್ಯ ಖಜಾಂಚಿ ಶಾಹೀದ್ ನಾಸಿರ್ ಪರಾರಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2022, 7:42 IST
Last Updated 22 ಸೆಪ್ಟೆಂಬರ್ 2022, 7:42 IST
ಪಿಎಫ್ಐ ಕಲಬುರಗಿ ಘಟಕದ  ಅಧ್ಯಕ್ಷ ಏಜಾಜ್ ಅಲಿ, ರಾಜ್ಯ ಖಜಾಂಚಿ ಶಾಹೀದ್ ನಾಸಿರ್
ಪಿಎಫ್ಐ ಕಲಬುರಗಿ ಘಟಕದ  ಅಧ್ಯಕ್ಷ ಏಜಾಜ್ ಅಲಿ, ರಾಜ್ಯ ಖಜಾಂಚಿ ಶಾಹೀದ್ ನಾಸಿರ್   

ಕಲಬುರಗಿ: ಇಲ್ಲಿನ ಟಿಪ್ಪು ಸುಲ್ತಾನ್ ನಗರದಲ್ಲಿ ಗುರುವಾರ ಬೆಳಿಗ್ಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಜಿಲ್ಲಾ ಘಟಕದ ಅಧ್ಯಕ್ಷ ಏಜಾಜ್ ಅಲಿ ಮತ್ತು ರಾಜ್ಯ ಘಟಕದ ಖಜಾಂಚಿ ಶಾಹೀದ್ ನಾಸಿರ್ ಮನೆ ಮತ್ತು ಕಚೇರಿ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಅಧಿಕಾರಿಗಳು ನಸುಕಿನ ಜಾವ ದಾಳಿ ನಡೆಸಿದರು.

ಏಜಾಜ್ ಅಲಿಗೆ ಅಧಿಕಾರಿಗಳು ವಶಕ್ಕೆ ಪಡೆದರು. ಶಾಹೀದ್ ನಾಸಿರ್ ಪರಾರಿಯಾಗಿದ್ದು, ಶೋಧ ಮುಂದುವರೆದಿದೆ. ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಏಜಾಜ್ ಮನೆಯಲ್ಲಿ ₹ 14 ಲಕ್ಷ ಸಿಕ್ಕಿದ್ದು, ವಶಪಡಿಸಿಕೊಳ್ಳಲಾಗಿದೆ.

ಬಂಧನ ಖಂಡಿಸಿ ಪಿಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಿಜೆಪಿ ಸರ್ಕಾರ ಮತ್ತು ಎನ್ಐಎ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.