ADVERTISEMENT

ಆಳಂದ: ವಿವಿಧೆಡೆ ಪಲ್ಸ್ ಪೋಲಿಯೊ ಅಭಿಯಾನ, 39905 ಮಕ್ಕಳಿಗೆ ಪೋಲಿಯೊ ಹನಿ ಗುರಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2020, 12:24 IST
Last Updated 20 ಜನವರಿ 2020, 12:24 IST
ಆಳಂದದ ಶರಣಮಂಟಪದಲ್ಲಿ ಚನ್ನಬಸವ ಪಟ್ಟದೇವರು ಮಗುವಿಗೆ ಪೋಲಿಯೊ ಹನಿ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು
ಆಳಂದದ ಶರಣಮಂಟಪದಲ್ಲಿ ಚನ್ನಬಸವ ಪಟ್ಟದೇವರು ಮಗುವಿಗೆ ಪೋಲಿಯೊ ಹನಿ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು   

ಆಳಂದ: ತಾಲ್ಲೂಕಿನಲ್ಲಿ 5 ವರ್ಷ ವಯಸ್ಸಿನೊಳಗಿನ ಒಟ್ಟು 39,905 ಮಕ್ಕಳನ್ನು ಗುರುತಿಸಲಾಗಿದ್ದು, ಇವರೆಲ್ಲರಿಗೂ ವಿಶ್ವ ಪಲ್ಸ್ ಪೋಲಿಯೊ ಅಭಿಯಾನದಲ್ಲಿ ಹನಿ ಹಾಕುವ ಗುರಿ ಇದೆ ಎಂದು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಡಾ.ವಿಜಯಲಕ್ಷ್ಮಿ ನಂದಿಕೋಲಮಠ ತಿಳಿಸಿದರು.

ಪಟ್ಟಣದ ಶರಣಮಂಟಪದಲ್ಲಿ ಭಾನುವಾರ ವಿಶ್ವ ಪಲ್ಸ್‌ ಪೋಲಿಯೊ ಅಭಿಯಾನದಡಿ ಮಕ್ಕಳಿಗೆ ಪೋಲಿಯೊ ಹನಿ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಪ್ರತಿ ಗ್ರಾಮದ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಟ್ಟು 212 ತಂಡಗಳು ರಚಿಸಲಾಗಿದೆ ಎಂದರು.

ADVERTISEMENT

ಶರಣಮಂಟಪದ ಪೀಠಾಧಿಪತಿ ಚನ್ನಬಸವ ಪಟ್ಟದೇವರು ಮಗುವಿಗೆ ಪೋಲಿಯೊ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ತಾಲ್ಲೂಕು ಮೇಲ್ವಿಚಾರಕಿ ವಿಜಯಲಕ್ಷ್ಮಿ ಹೊಸಮನಿ, ಡಾ.ಪೃಥ್ವಿರಾಜ ಚವ್ಹಾಣ, ಡಾ.ವಿನಾಯಕ ತಾಟಿ, ಡಾ.ಸುಶಾಂತ ಸಂಗಾ, ದೇವಕಿ ಇದ್ದರು. ಪಟ್ಟಣದ ಬಸ್‌ ನಿಲ್ದಾಣ ಸೇರಿದಂತೆ ವಿವಿಧೆಡೆ ದಿನವಿಡೀ ಪೋಲಿಯೊ ಲಸಿಕೆ ಹಾಕುವ ಕಾರ್ಯ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.