
ಪ್ರಜಾವಾಣಿ ವಾರ್ತೆ
(ಕಲಬುರಗಿ ಜಿಲ್ಲೆ): ರಾಜ್ಯದ ಗಮನ ಸೆಳೆದಿರುವ ಆರ್‌ಎಸ್‌ಎಸ್ ಚಿತ್ತಾಪುರ ಪಥ ಪಥಸಂಚಲನ ಭಾನುವಾರ ಮಧ್ಯಾಹ್ನ 3.45ಕ್ಕೆ ಶುರುವಾಯಿತು.
ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಿಂದ ಶುರುವಾದ ಗಣವೇಷಧಾರಿಗಳ ಮೆರವಣಿಗೆ ಮೇಲೆ ನೆರೆದಿದ್ದ ನೂರಾರು ಮಂದಿ ಪುಷ್ಪ ದಳಗಳನ್ನು ಎರಚಿ ಹುರಿದುಂಬಿಸಿದರು. ನೆರೆದಿದ್ದವರು 'ಭಾರತ ಮಾತಾಕೀ ಜೈ, ವಂದೇ ಮಾತರಂ ಹಾಗೂ ಜೈ ಶ್ರೀರಾಮ' ಘೋಷಣೆಗಳನ್ನು ಮೊಳಗಿಸಿದರು.
ಸಾವಿರಕ್ಕೂ ಅಧಿಕ ಪೊಲೀಸ್ ಸರ್ಪಗಾವಲಿನ ಪಥಸಂಚಲನವು ಕಲ್ಯಾಣ ಮಂಟಪದಿಂದ, ಬಸ್ ನಿಲ್ದಾಣ, ಕನ್ಯಾ ಸರ್ಕಾರಿ ಪ್ರೌಢಶಾಲೆ, ತಾಲ್ಲೂಕು ಪಂಚಾಯಿತಿ ಎದುರಿನಿಂದ ಮರಳಿ ಕಲ್ಯಾಣ ಮಂಟಪಕ್ಕೆ ತಲುಪಲಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.