ADVERTISEMENT

ಬೇಸಿಗೆ ರಜೆ: ಬೆಂಗಳೂರು–ಬೀದರ್‌ ನಡುವೆ ವಿಶೇಷ ರೈಲು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2024, 16:27 IST
Last Updated 20 ಏಪ್ರಿಲ್ 2024, 16:27 IST
ರೈಲು
ರೈಲು   

ಕಲಬುರಗಿ: ಬೇಸಿಗೆ ರಜೆಯಲ್ಲಿ ಪ್ರಯಾಣಿಕರ ದಟ್ಟಣೆ ನಿರ್ವಹಿಸಲು ಬೆಂಗಳೂರು–ಬೀದರ್‌ ನಡುವೆ ಎರಡು ವಿಶೇಷ ರೈಲುಗಳನ್ನು ಓಡಿಸಲು ದಕ್ಷಿಣ ಮಧ್ಯ ರೈಲ್ವೆ ನಿರ್ಧರಿಸಿದೆ.

ಒಂದು ರೈಲು ಏಪ್ರಿಲ್‌ 21ರಿಂದ ಮೇ 13ರ ತನಕ ಬೆಂಗಳೂರಿನ ಸರ್‌.ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ ಹಾಗೂ ಬೀದರ್‌ ನಡುವೆ ವಾರಕ್ಕೆ ಎರಡು ದಿನ ಸಂಚರಿಸಲಿದೆ. ಮತ್ತೊಂದು ರೈಲು ಏ.26ರಿಂದ ಜೂನ್‌ 14ರ ಅವಧಿಯಲ್ಲಿ ವಾರಕ್ಕೆ ಒಮ್ಮೆ ಸಂಚರಿಸಲಿದೆ.

06589 ಸಂಖ್ಯೆಯ ರೈಲು ಭಾನುವಾರ ಹಾಗೂ ಮಂಗಳವಾರ ಬೆಂಗಳೂರಿನ ಸರ್‌.ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ರಾತ್ರಿ 11 ಗಂಟೆಗೆ ಹೊರಟು, ಮರುದಿನ ಮಧಾಹ್ನ 12 ಗಂಟೆಗೆ ಬೀದರ್‌ ತಲುಪಲಿದೆ. 06590 ಸಂಖ್ಯೆಯ ರೈಲು ಸೋಮವಾರ ಹಾಗೂ ಬುಧವಾರ ಬೀದರ್‌ನಿಂದ ಮಧ್ಯಾಹ್ನ 2.10ಕ್ಕೆ ಹೊರಟು, ಮರುದಿನ ನಸುಕಿನ 4.15ಕ್ಕೆ ಬೆಂಗಳೂರು ತಲುಪಲಿದೆ.

ADVERTISEMENT

06597 ಸಂಖ್ಯೆಯ ರೈಲು ಪ್ರತಿ ಶುಕ್ರವಾರ ಬೆಂಗಳೂರಿನ ಸರ್‌.ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ರಾತ್ರಿ 11 ಗಂಟೆಗೆ ಹೊರಟು ಮರುದಿನ ಮಧಾಹ್ನ 12 ಗಂಟೆಗೆ ಬೀದರ್‌ ತಲುಪಲಿದೆ. 06598 ಸಂಖ್ಯೆಯ ರೈಲು ಪ್ರತಿ ಶನಿವಾರ ಬೀದರ್‌ನಿಂದ ಮಧ್ಯಾಹ್ನ 2.10ಕ್ಕೆ ಹೊರಟು, ಮರುದಿನ ನಸುಕಿನ 4.15ಕ್ಕೆ ಬೆಂಗಳೂರು ತಲುಪಲಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.