ADVERTISEMENT

ಚಿಂಚೋಳಿ: ಹುಲಿ ಗಣತಿ ಆರಂಭ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2022, 12:36 IST
Last Updated 21 ಫೆಬ್ರುವರಿ 2022, 12:36 IST
ಚಿಂಚೋಳಿ ವನ್ಯಜೀವಿ ಧಾಮದಲ್ಲಿ ಹುಲಿ ಗಣತಿ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳು
ಚಿಂಚೋಳಿ ವನ್ಯಜೀವಿ ಧಾಮದಲ್ಲಿ ಹುಲಿ ಗಣತಿ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳು   

ಚಿಂಚೋಳಿ (ಕಲಬುರಗಿ): ದಕ್ಷಿಣ ಭಾರತದ ಏಕೈಕ ಶುಷ್ಕ ವಲಯದ ವನ್ಯಜೀವಿ ಧಾಮ ಎಂಬ ಹೆಗ್ಗಳಿಕೆ ಹೊಂದಿರುವ ಚಿಂಚೋಳಿ ವನ್ಯಜೀವಿ ಧಾಮದಲ್ಲಿ ಹುಲಿ ಗಣತಿ ಆರಂಭವಾಗಿದೆ.

‘14 ಗಸ್ತುಗಳಿದ್ದು, ಫೆ.28ವರೆಗೆ ಗಣತಿ ನಡೆಯಲಿದೆ. ಪ್ರತಿ ಗಸ್ತಿನಲ್ಲಿ 5 ಕಿ.ಮೀ. ಕಾಲ್ನಡಿಗೆ ಮೂಲಕ‌ ಸಾಗಿ ಅಲ್ಲಿ ದೊರೆಯುವ ಮಾಂಸಾಹಾರಿ ಪ್ರಾಣಿಗಳ‌ ಮಾಹಿತಿ ದಾಖಲಿಸಲಾಗುತ್ತಿದೆ. ಗಣತಿಯಲ್ಲಿ ವನ್ಯಜೀವಿಗಳ ಹೆಜ್ಜೆ ಗುರುತು, ಹಿಕ್ಕೆಗಳು, ಕಳೇಬರ, ನೆಲ ಹಾಗೂ ಮರ ಅಗೆದಿರುವ ಕುರಿತು ಮಾಹಿತಿ ದಾಖಲಿಸಲಾಗುತ್ತದೆ’ ಎಂದು ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಹಾಣ ‘ಪ್ರಜಾವಾಣಿ’ಗೆ ತಿಳಿಸಿದರು.

2 ಕಿ.ಮೀ‌ ಉದ್ದದಲ್ಲಿ ಸುಣ್ಣದಿಂದ ರೇಖೆ ಹಾಕಿ ಅದರಲ್ಲಿ ವಿವಿಧ ವಿನ್ಯಾಸದ ವೃತ್ತ ಹಾಕಿ ಅದರಲ್ಲಿ ದೊರೆತ ಹಿಕ್ಕಿಗಳು, ಹುಲ್ಲು, ಸಸ್ಯ ಪ್ರಕಾರಗಳ ಮಾಹಿತಿ ದಾಖಲಿಸಲಾಗುತ್ತಿದೆ ಎಂದರು.

ADVERTISEMENT

ಉಪ ವಲಯ ಅರಣ್ಯಾಧಿಕಾರಿಗಳಾದ ಸಿದ್ಧಾರೂಡ ಹೊಕ್ಕುಂಡಿ, ಭಾನುಪ್ರತಾಪಸಿಂಗ್, ಗಜಾನಂದ, ನಟರಾಜ ಹಾಗೂ ಅರಣ್ಯ ರಕ್ಷಕರಾದ ಶೇಖ ಅಮೇರ, ಮಾಳಪ್ಪ ಪೂಜಾರಿ, ಹಾಲೇಶ ಹಾಗೂ ಪ್ರಭು ಜಾಧವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.