ಅಂಬರ್ ಗ್ರೀಸ್
ಮಡಿಕೇರಿ: ವಿರಾಜಪೇಟೆ ತಾಲ್ಲೂಕಿನ ಬೆಟೋಳಿ ಗ್ರಾಮದ ಸಮೀಪ ಕೇರಳದಿಂದ ಸಾಗಣೆ ಮಾಡುತ್ತಿದ್ದ ₹ 10 ಕೋಟಿ ಮೌಲ್ಯದ ತಿಮಿಂಗಲದ ವಾಂತಿ (ಅಂಬರ್ ಗ್ರೀಸ್ )ಯನ್ನು ವಶಪಡಿಸಿಕೊಂಡಿರುವ ವಿರಾಜಪೇಟೆ ಪೊಲೀಸರು 10 ಮಂದಿಯನ್ನು ಬಂಧಿಸಿದ್ದಾರೆ.
ಶಿವಮೊಗ್ಗದ ಒಬ್ಬರು ಹಾಗೂ ಉಳಿದ 9 ಮಂದಿ ಕೇರಳದವರಾಗಿದ್ದು ಎಲ್ಲರನ್ನೂ ಗುರುವಾರ ಬೆಳಿಗ್ಗೆ ಬಂಧಿಸಲಾಯಿತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಸ್.ಶಂಶುದ್ದೀನ್ (45), ಎಂ.ನವಾಜ್,(54), ವಿ.ಕೆ.ಲತೀಶ್, (53), ರಿಜೇಶ್.ವಿ, (40), ಪ್ರಶಾಂತ್.ಟಿ, (52), ಎ.ವಿ. ರಾಘವೇಂದ್ರ,. (48), ಬಾಲಚಂದ್ರನಾಯಕ್, (55), ಸಾಜುಥಾಮಸ್ (58), ಜೋಬಿಸ್.ಕೆ.ಕೆ. (33) ಎಂ.ಜಿಜೇಶ್ (40) ಬಂಧಿತ ಅರೋಪಿಗಳು. ಇವರಿಂದ
10 ಕೆ.ಜಿ 390 ಗ್ರಾಂ ಅಂಬರ್‌ಗ್ರೀಸ್ (ತಿಮಿಂಗಲದ ವಾಂತಿ) ನೋಟು ಎಣಿಸುವ ಯಂತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.