ADVERTISEMENT

ಭಾಗಮಂಡಲ: ಅಂಜನಿಪುತ್ರ ಸೇವಾ ಬಳಗದ ವತಿಯಿಂದ ಆಂಬುಲೆನ್ಸ್ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 13:09 IST
Last Updated 2 ಜೂನ್ 2025, 13:09 IST
ನಾಪೋಕ್ಲು ಸಮೀಪದ ಭಾಗಮಂಡಲದ ಅಂಜನಿಪುತ್ರ ಸೇವಾ ಬಳಗ ನೀಡಿದ ಆಂಬುಲೆನ್ಸ್ ಅನ್ನು ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಜೋಯಪ್ಪ ಲೋಕಾರ್ಪಣೆಗೊಳಿಸಿದರು
ನಾಪೋಕ್ಲು ಸಮೀಪದ ಭಾಗಮಂಡಲದ ಅಂಜನಿಪುತ್ರ ಸೇವಾ ಬಳಗ ನೀಡಿದ ಆಂಬುಲೆನ್ಸ್ ಅನ್ನು ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಜೋಯಪ್ಪ ಲೋಕಾರ್ಪಣೆಗೊಳಿಸಿದರು   

ನಾಪೋಕ್ಲು: ಸಮೀಪದ ಭಾಗಮಂಡಲದ ಅಂಜನಿಪುತ್ರ ಸೇವಾ ಬಳಗದ ವತಿಯಿಂದ ಆಂಬುಲೆನ್ಸ್ ಅನ್ನು ಸೋಮವಾರ ಲೋಕಾರ್ಪಣೆಗೊಳಿಸಲಾಯಿತು.

ಆಂಬುಲೆನ್ಸ್ ಲೋಕಾರ್ಪಣೆಗೊಳಿಸಿದ ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಜೋಯಪ್ಪ, ‘ಭಾಗಮಂಡಲ ವ್ಯಾಪ್ತಿಯ ಜನರಿಗೆ ತುರ್ತು ಚಿಕಿತ್ಸಾ ವಾಹನದ ಅವಶ್ಯಕತೆ ಇತ್ತು. ಇದನ್ನು ಮನಗಂಡು ಅಂಜನಿಪುತ್ರ ಸೇವಾ ಬಳಗ ಸಮಾಜ ಸೇವೆಗೆ ಮುಂದಾಗಿದೆ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ, ಆರೋಗ್ಯದ ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಅವಶ್ಯಕತೆ ಇತ್ತು. ಅಂಜನಿಪುತ್ರ ಸೇವಾ ಬಳಗವು ಆಂಬುಲೆನ್ಸ್ ಕೊಡುಗೆ ನೀಡಿರುವುದು ಉತ್ತಮ ಕಾರ್ಯ. ಸರ್ಕಾರ ನಿರ್ವಹಿಸಬೇಕಾದ ಜವಾಬ್ದಾರಿಯನ್ನು ಸಂಘ–ಸಂಸ್ಥೆಗಳು ನಿರ್ವಹಿಸುತ್ತಿರುವುದು ಶ್ಲಾಘನೀಯ’ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳನ ರವಿ ಅಧ್ಯಕ್ಷತೆ ವಹಿಸಿದ್ದರು. ಭಾಗಮಂಡಲ ಠಾಣೆಯ ಪಿಎಸ್ಐ ಶೋಭಾ ಲಮಾಣಿ, ಅಂಜನಿಪುತ್ರ ಸೇವಾ ಬಳಗದ ಅಧ್ಯಕ್ಷ ಚೇತನ್, ಪ್ರಮುಖರಾದ ನಂಜುಂಡಪ್ಪ, ಅಮೆ ಬಾಲಕೃಷ್ಣ, ಕುದುಪಜೆ ಪಳಂಗಪ್ಪ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.