ADVERTISEMENT

ಮಡಿಕೇರಿಯಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 6:41 IST
Last Updated 27 ಜೂನ್ 2025, 6:41 IST
   

ಮಡಿಕೇರಿ: ನಗರದ ಕರ್ಣಂಗೇರಿಯಲ್ಲಿ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು 3ಡಿ ಕಿರು ತಾರಾಲಯ ಸ್ಥಾಪನೆಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.

ಒಟ್ಟು ₹12.65 ಕೋಟಿ ಮೊತ್ತದ ಈ ಕಟ್ಟಡದಲ್ಲಿ 3ಡಿ ಕಿರು ತಾರಾಲಯ, ಫನ್ ಸೈನ್ಸ್ ಗ್ಯಾಲರಿ, ಸಭಾಂಗಣಗಳು ಇರಲಿವೆ‌.

ಈ ಕೇಂದ್ರಕ್ಕಾಗಿ ಇಲ್ಲಿ ಒಟ್ಟು 7.10 ಎಕರೆ ಜಾಗ ನೀಡಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.