ADVERTISEMENT

ವಿರಾಜಪೇಟೆ| ಸಾಮ್ರಾಜ್ಯಶಾಹಿ ನೀತಿ ಕುರಿತು ಅರಿವು ಮುಖ್ಯ: ದುರ್ಗಾ ಪ್ರಸಾದ್

‘ಯು.ಎಸ್ ಸಾಮ್ರಾಜ್ಯಶಾಹಿ ಭಾರತದ ಜನತೆಯ ಶತ್ರು’ ಕೃತಿ ಬಿಡುಗಡೆ, ಸಂವಾದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 4:52 IST
Last Updated 2 ಮಾರ್ಚ್ 2026, 4:52 IST
ವಿರಾಜಪೇಟೆಯಲ್ಲಿ ಸಿಪಿಐಎಂ ಕಚೇರಿಯಲ್ಲಿ ಈಚೆಗೆ ಕೆಂಪು ಪುಸ್ತಕ ದಿನಾಚರಣೆ ಅಂಗವಾಗಿ ‘ಯು.ಎಸ್ ಸಾಮ್ರಾಜ್ಯಶಾಹಿ ಭಾರತದ ಜನತೆಯ ಶತ್ರು’ ಪುಸ್ತಕವನ್ನು ಪಕ್ಷದ ಪ್ರಮುಖರು ಬಿಡುಗಡೆಗೊಳಿಸಿದರು
ವಿರಾಜಪೇಟೆಯಲ್ಲಿ ಸಿಪಿಐಎಂ ಕಚೇರಿಯಲ್ಲಿ ಈಚೆಗೆ ಕೆಂಪು ಪುಸ್ತಕ ದಿನಾಚರಣೆ ಅಂಗವಾಗಿ ‘ಯು.ಎಸ್ ಸಾಮ್ರಾಜ್ಯಶಾಹಿ ಭಾರತದ ಜನತೆಯ ಶತ್ರು’ ಪುಸ್ತಕವನ್ನು ಪಕ್ಷದ ಪ್ರಮುಖರು ಬಿಡುಗಡೆಗೊಳಿಸಿದರು   

ವಿರಾಜಪೇಟೆ: ಪಟ್ಟಣದ ಸಿಪಿಐಎಂ ಕಚೇರಿಯಲ್ಲಿ ಈಚೆಗೆ ಕೆಂಪು ಪುಸ್ತಕ ದಿನಾಚರಣೆ ಅಂಗವಾಗಿ ‘ಯು.ಎಸ್ ಸಾಮ್ರಾಜ್ಯಶಾಹಿ ಭಾರತದ ಜನತೆಯ ಶತ್ರು’ ಎಂಬ ಪುಸ್ತಕ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮ ನಡೆಯಿತು.

ಪುಸ್ತಕ ಬಿಡುಗಡೆಗೊಳಿಸಿದ ಸಿಪಿಐಎಂ ಪಕ್ಷದ ಮುಖಂಡ ದುರ್ಗಾ ಪ್ರಸಾದ್, ಅಮೇರಿಕಾದ ಸಾಮ್ರಾಜ್ಯಶಾಹಿಯು ಸಮಾಜವಾದಿ ರಾಷ್ಟ್ರಗಳ ಸಂಪತ್ತನ್ನು ಲೂಟಿ ಮಾಡಲು ನಿರಂತರ ಮಿಲಿಟರಿ ದಾಳಿಗಳು ಮತ್ತು ರಾಜಕೀಯ ಒತ್ತಡಗಳನ್ನು ಬಳಸುತ್ತಿದೆ. ಭಾರತದ ಮೇಲೂ ನೇರ ಸೈನಿಕ ದಾಳಿಯ ಬದಲಿಗೆ ರೈತರು ಹಾಗೂ ಕಾರ್ಮಿಕರ ಪರವಾದ ಕಾನೂನುಗಳನ್ನು ಬದಲಾಯಿಸುವ ಮೂಲಕ ನೀತಿಗಳನ್ನು ತಮ್ಮ ಪರ ಮಾಡಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದರು.

ಸಾಮ್ರಾಜ್ಯಶಾಹಿ ನೀತಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ. ಇಲ್ಲವಾದಲ್ಲಿ ದೇಶದ ಭವಿಷ್ಯಕ್ಕೆ ಅಪಾಯ ಎದುರಾಗಬಹುದು. ಇದರ ವಿರುದ್ಧ ಸಂಘಟಿತ ಆಂದೋಲನಗಳು ನಡೆಯಬೇಕೆಂದು ಕರೆ ನೀಡಿದರು.

ADVERTISEMENT

ಸಿಪಿಐಎಂ ಪಕ್ಷದ ಸದಸ್ಯ ಎ.ಸಿ.ಸಾಬು ಅವರು ಮಾತನಾಡಿ, ಹೊಸ ಕಾರ್ಮಿಕ ನೀತಿಗಳು ಸಂಘಟನೆಗಳನ್ನು ದುರ್ಬಲಗೊಳಿಸುವ ಮೊದಲ ಹೆಜ್ಜೆಯಾಗಿದ್ದು, ಕಾನೂನುಗಳ ಮೂಲಕ ಕಾರ್ಮಿಕ ಸಂಘಟನೆಗಳ ಶಕ್ತಿಯನ್ನು ಒಡೆಯಲು ಪ್ರಯತ್ನಗಳು ನಡೆಯುತ್ತಿವೆ. ಕರಾಳ ಕಾನೂನುಗಳನ್ನು ವಿರೋಧಿಸುವ ಸಂಘಟನೆಗಳ ಶಕ್ತಿಯನ್ನು ಏಕೀಕರಿಸಿ, ಚಳವಳಿಗಳ ಮೂಲಕ ಸಾಮ್ರಾಜ್ಯಶಾಹಿ ಶಕ್ತಿಗಳ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯ ಮತ್ತು ಸಮಾಜದ ಜವಾಬ್ದಾರಿಯಾಗಿದೆ ಎಂದರು.

ಸಿಪಿಐಎಂ ಪಕ್ಷದ ಶಾಖಾ ಕಾರ್ಯದರ್ಶಿ ಶಾಜಿ ರಮೇಶ್, ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಪದ್ಮಿನಿ ಶ್ರೀಧರ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ವಿಭಾಗೀಯ ಸಂಚಾಲಕ ಸತೀಶ್, ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ಎಚ್.ಎಸ್.ಕುಮಾರ್, ಕಟ್ಟಡ ಕಾರ್ಮಿಕ ಸಂಘದ ಕೆ.ಕೆ.ಹರಿದಾಸ್, ಖಾಸಿಂ, ಡಿವೈಎಫ್ಐ ಸಂಘಟನೆಯ ಜಿಲ್ಲಾ ಮುಖಂಡ ಸಾಧಿಕ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.