ADVERTISEMENT

ನಾಪೋಕ್ಲು: ಪರಿಸರ ಸಂರಕ್ಷಣೆಗೆ ಸೈಕಲ್ ಜಾಥಾ

​ಪ್ರಜಾವಾಣಿ ವಾರ್ತೆ
Published 25 ಜನವರಿ 2025, 4:53 IST
Last Updated 25 ಜನವರಿ 2025, 4:53 IST
ನಾಪೋಕ್ಲು ಸಮೀಪದ ಮೂರ್ನಾಡು ಮಾರುತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಕ್ಲೀನ್‌ಕೂರ್ಗ್ ಇನಿಷಿಯೇಟಿವ್‌ನ ಪದಾಧಿಕಾರಿಗಳು ‘ಪರಿಸರವನ್ನು ಉಳಿಸಿ, ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ’ ಧ್ಯೇಯ ವಾಕ್ಯದೊಂದಿಗೆ ವಿರಾಜಪೇಟೆಯ ಪ್ರಗತಿ ಶಾಲೆಯವರೆಗೆ ಸೈಕಲ್‌ ಜಾಥಾ ನಡೆಸಿದರು
ನಾಪೋಕ್ಲು ಸಮೀಪದ ಮೂರ್ನಾಡು ಮಾರುತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಕ್ಲೀನ್‌ಕೂರ್ಗ್ ಇನಿಷಿಯೇಟಿವ್‌ನ ಪದಾಧಿಕಾರಿಗಳು ‘ಪರಿಸರವನ್ನು ಉಳಿಸಿ, ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ’ ಧ್ಯೇಯ ವಾಕ್ಯದೊಂದಿಗೆ ವಿರಾಜಪೇಟೆಯ ಪ್ರಗತಿ ಶಾಲೆಯವರೆಗೆ ಸೈಕಲ್‌ ಜಾಥಾ ನಡೆಸಿದರು   

ನಾಪೋಕ್ಲು: ಇಲ್ಲಿಗೆ ಸಮೀಪದ ಮೂರ್ನಾಡಿನ ಮಾರುತಿ ಸಂಯುಕ್ತ ಪೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ವತಿಯಿಂದ ಸೈಕಲ್‌ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಪರಿಸರವನ್ನು ಉಳಿಸಿ, ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ-ಧ್ಯೇಯ ವಾಕ್ಯದೊಂದಿಗೆ ಮಾರುತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಕ್ಲೀನ್‌ಕೂರ್ಗ್ ಇನಿಷಿಯೇಟಿವ್‌ನ ಪದಾಧಿಕಾರಿಗಳು ವಿರಾಜಪೇಟೆಯ ಪ್ರಗತಿ ಶಾಲೆಯವರೆಗೆ ಸೈಕಲ್‌ ಜಾಥಾ ನಡೆಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಕ್ಲೀನ್‌ಕೂರ್ಗನ ಸಂಚಾಲಕ, ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಬಡುವಂಡ ಅರುಣ್‌ ಅಪ್ಪಚ್ಚು, ಕೊಡಗು ಜಿಲ್ಲೆಯನ್ನು ಸಂಪೂರ್ಣ ಸ್ವಚ್ಛ ಜಿಲ್ಲೆ ಮತ್ತು ಹಸಿರು ಜಿಲ್ಲೆಯಾಗಿ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಲ್ಲಬೇಕು. ಸ್ವಚ್ಛ ಪರಿಸರ ನಿರ್ಮಾಣವಾಗಬೇಕಾದರೆ ಎಲ್ಲೆಂದರಲ್ಲಿ ಕಸ ಎಸೆಯಬಾರದು. ಸ್ಚಚ್ಛತಾ ಮನೋಭಾವನೆಯನ್ನು ವಿದ್ಯಾರ್ಥಿ ಜೀವನದಿಂದಲೇ ಅಳವಡಿಸಿಕೊಳ್ಳಬೇಕು ಎಂದರು.

ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಕಿ ದಮಯಂತಿ ಸಿ.ಎ, ಕ್ಲೀನ್‌ಕೂರ್ಗ್ ಮೂರ್ನಾಡು ಶಾಖೆಯ ಸದಸ್ಯರು, ಮಾರುತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.