ADVERTISEMENT

ಕೊಡಗಿನಲ್ಲಿ 23 ಕಾಡಾನೆಗಳ ಪರೇಡ್‌!

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2019, 8:34 IST
Last Updated 12 ಆಗಸ್ಟ್ 2019, 8:34 IST
   

ಸಿದ್ದಾಪುರ: ಕೊಡಗಿನ ವಾಲ್ನೂರು ಹಾಗೂ ತ್ಯಾಗತ್ತೂರು ಭಾಗದಲ್ಲಿ ಶನಿವಾರ ಒಟ್ಟಿಗೆ 23 ಕಾಡಾನೆಗಳು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದವು. ಕಾಡಾನೆ ಹಿಂಡನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಕೊನೆಗೂ ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾದರು.

ಕಾಡಾನೆಗಳು ಬೆಳೆ ನಾಶ ಮಾಡುತ್ತಿದ್ದವು. ಇದರಿಂದ ಗ್ರಾಮಸ್ಥರೂ ಭಯಗೊಂಡಿದ್ದರು. ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸಿ ದುಬಾರೆ ಮೀಸಲು ಅರಣ್ಯಕ್ಕೆ ಅಟ್ಟಿದರು.

ಕಾಡಾನೆ ಹಿಂಡಿನಲ್ಲಿ ಸಲಗ, 5 ಮರಿಗಳು ಸೇರಿದಂತೆ 23 ಕಾಡಾನೆಗಳು ಇದ್ದವು. ಅವುಗಳು ತೋಟದಲ್ಲಿ ಓಡಾಡುತ್ತಿದ್ದ ದೃಶ್ಯ ಅರಣ್ಯ ಇಲಾಖೆ ಸಿಬ್ಬಂದಿಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಆನೆಗಳು ಪರೇಡ್ ನಡೆಸಿದಂತೆ ಕಾಣಿಸುತ್ತದೆ.

ADVERTISEMENT

ಕುಶಾಲನಗರ ವಲಯ ಅರಣ್ಯಾಧಿಕಾರಿ ಅರುಣ್, ಉಪ ವಲಯ ಅರಣ್ಯಾಧಿಕಾರಿ ವಿಲಾಸ್, ಅರಣ್ಯ ರಕ್ಷಕ ಚರಣ್, ವೀಕ್ಷಕ ಜಗದೀಶ್, ಸಿಬ್ಬಂದಿಗಳಾದ ವಾಸುದೇವ, ಧರ್ಮಪಾಲ್, ಆಲ್ಬರ್ಟ್, ಅಪ್ಪಾಸ್ವಾಮಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.