ಸೋಮವಾರಪೇಟೆ: ಗಾಳಿ ಮಳೆಯಿಂದ ವಾಸದ ಮನೆಗೆ ಹಾನಿಯಾಗಿದ್ದ ಬಡ ಕುಟುಂಬಗಳಿಗೆ ದಾನಿಗಳು ನೀಡಿದ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ಕರ್ನಾಟಕ ರಕ್ಷಣ ವೇದಿಕೆಯ ಶಿವರಾಮೇಗೌಡ ಬಣದ ಪದಾಧಿಕಾರಿಗಳು ಈಚೆಗೆ ವಿತರಣೆ ಮಾಡಿದರು.
ಗೌಡಳ್ಳಿ ಗ್ರಾಮ ಪಂಚಾಯತಿಗೆ ಸೇರಿದ ಚನ್ನಾಪುರ ಹಾಗೂ ಶುಂಠಿ ಮಂಗಳೂರು ಗ್ರಾಮದಲ್ಲಿ ಮಳೆ–ಗಾಳಿಗೆ ಮನೆಗಳಿಗೆ ಹಾನಿಯಾಗಿತ್ತು. ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ಅವರು, ಕೊಪರ್ ಎಸ್ಟೇಟ್ ಮಾಲೀಕರಾದ ಕೆ.ವಿ.ನಿಶಾಂತ್ ಅವರಿಗೆ ಮಾಹಿತಿ ನೀಡಿದ ಹಿನ್ನೆಲೆ, ಅವರು ನೀಡಿದ ಆಹಾರ ಸಾಮಗ್ರಿಗಳನ್ನು ಸಂತ್ರಸ್ತ ಎಂಟು ಕುಟುಂಬಗಳಿಗೆ ವಿತರಿಸಲಾಯಿತು.
ಪ್ರಮುಖರಾದ ಶಿವಪ್ರಸಾದ್, ಟಿ.ಆರ್. ರಾಮಚಂದ್ರ, ವಿಶ್ವನಾಥ್, ವಿಶ್ವರೂಪ ಆಚಾರ್ಯ, ಡೀವನ್ ಡಿಸೋಜ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.