ಗೋಣಿಕೊಪ್ಪಲು: ಪರಿಸರ ದಿನದಂದು ನೆಟ್ಟ ಗಿಡಗಳನ್ನು ವರ್ಷಪೂರ್ತಿ ಸಂರಕ್ಷಣೆ ಮಾಡಬೇಕು. ಸ್ವಚ್ಛ ಪರಿಸರ ಇದ್ದರೆ ಮಾತ್ರ ಜೀವ ಸಂಕುಲ ಆರೋಗ್ಯವಾಗಿ ಇರಲು ಸಾಧ್ಯ ಎಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಸಿದ್ಧಾರೂಢ ಸಿಂಗಾಡಿ ಹೇಳಿದರು.
ಗೋಣಿಕೊಪ್ಪಲು ಕಾವೇರಿ ಕಾಲೇಜು ಎನ್‌ಎಸ್‌ಎಸ್ ಘಟಕದಿಂದ ಕಾಲೇಜು ಆವರಣದಲ್ಲಿ ವಿವಿಧ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಗುರುವಾರ ಆಚರಿಸಿದ ವಿಶ್ವ ಪರಿಸರ ದಿನದಲ್ಲಿ ಅವರು ಮಾತನಾಡಿದರು.
ಉಪ ಪ್ರಾಂಶುಪಾಲರಾದ ಪ್ರೊ. ಎಂ.ಎಸ್.ಭಾರತಿ ಅಧ್ಯಕ್ಷತೆ ವಹಿಸಿದ್ದರು. ಕಚೇರಿ ಅಧೀಕ್ಷಕಿ ಟಿ.ಕೆ.ಲತಾ, ಎನ್. ಎಸ್. ಎಸ್ ಅಧಿಕಾರಿಗಳಾದ ಎಂ.ಎ.ಕುಶಾಲಪ್ಪ, ಕೆ.ಎಸ್.ಪೂಜಾ. ಹಾಗೂ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪಾಲಿಬೆಟ್ಟ ಕಾಲೇಜು: ಮಾನವನ ದುರಾಸೆಯಿಂದಾಗಿ ಜಲಮಾಲಿನ್ಯ, ವಾಯುಮಾಲಿನ್ಯ ಹಾಗೂ ಮಣ್ಣು ಮಾಲಿನ್ಯವಾಗುತ್ತಿದೆ. ಪರಿಸರಸ್ನೇಹಿ ಉತ್ಪನ್ನಗಳನ್ನು ಮಾತ್ರ ಬಳಸಬೇಕೆಂದು ಪಾಲಿಬೆಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನೀಲಕಂಠೇಗೌಡ ಹೇಳಿದರು. ವಿದ್ಯಾರ್ಥಿಗಳು ಕಾಲೇಜು ಆವರಣವನ್ನು ಸ್ವಚ್ಛಗೊಳಿಸಿ ಅರಣ್ಯ ಇಲಾಖೆ ನೀಡಿದ ಗಿಡವನ್ನು ನೆಟ್ಟರು.
ಕಾಲೇಜಿನಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಿತಿಮತಿ ಆರ್‌ಎಫ್‌ಒ ಗಂಗಾಧರ್, ಡಿಆರ್‌ಎಫ್‌ಒ ಪ್ರಶಾಂತ್, ರೇಂಜ್ ಆಫೀಸರ್ ಶಶಿ, ಹಿರಿಯ ಉಪನ್ಯಾಸಕಿ ಶ್ರೀಮತಿ ಕೆ.ಕೆ.ಶೈನಾ, ನಿವೃತ್ತ ಯೋಧರಾದ ಸೋಮಯ್ಯ ಹಾಗೂ ಲವ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.