ಕೊಡಗಿನಲ್ಲಿ ಮಳೆ
ಮಡಿಕೇರಿ: ನಗರ ಸೇರಿದಂತೆ ಕೊಡಗು ಜಿಲ್ಲೆಯ ಹಲವೆಡೆ ಬುಧವಾರ ರಾತ್ರಿ ಇಡೀ ಧಾರಾಕಾರವಾಗಿ ಮಳೆ ಸುರಿದಿದೆ. ಗುರುವಾರ ಬೆಳಿಗ್ಗೆಯೂ ಬಿರುಸಿನ ಮಳೆ ಮುಂದುವರಿದಿದೆ.
ಸುರಿಯುತ್ತಿರುವ ಮಳೆಯಿಂದ ಮಡಿಕೇರಿ-ವಿರಾಜಪೇಟೆ ಸಂಪರ್ಕ ಕಲ್ಪಿಸುವ ಭೇತ್ರಿ ಬಳಿ ಕಾವೇರಿ ನದಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಸೇತುವೆಗೆ ನೀರು ತಲುಪಲು ಇನ್ನು ಕೆಲವೇ ಅಡಿಗಳಷ್ಟು ಮಾತ್ರವೇ ಬಾಕಿ ಉಳಿದಿದೆ.
ಇಂದೂ ಅಂಗನವಾಡಿ, ಶಾಲೆಗಳಿಗೆ, ಪಿಯು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಭೇತ್ರಿ ಸೇತುವೆ ಬಳಿ ನೀರಿನ ಮಟ್ಟ ಹೆಚ್ಚಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.