ADVERTISEMENT

ಕೊಡಗಿನಲ್ಲಿ ಮುಂದುವರೆದ ಗಾಳಿ, ಮಳೆ; ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2022, 4:36 IST
Last Updated 16 ಜುಲೈ 2022, 4:36 IST
   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಇಡೀ ಭಾರಿ ಗಾಳಿಯೊಂದಿಗೆ ಮಳೆ ಸುರಿದಿದೆ.ಇದರಿಂದ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ.

ಸುಂಟಿಕೊಪ್ಪ ಹೋಬಳಿಯ ಗುಂಡುಗುಟ್ಟಿ ಗ್ರಾಮದಲ್ಲಿ ಆಟೊವೊಂದರ ಮೇಲೆ ಮರ ಉರುಳಿ, ಆಟೊ‌ ಜಖಂಗೊಂಡಿದೆ. ಏಳನೇ ಹೊಸಕೋಟೆಯಲ್ಲಿ ರಸ್ತೆಗೆ ವಿದ್ಯುತ್ ಕಂಬ ಬಿದ್ದಿದೆ‌. ಕರಿಕೆ ಗ್ರಾಮದಲ್ಲೂ ವಿದ್ಯುತ್ ಕಂಬಗಳು ಉರುಳಿವೆ.

ಹಾರಂಗಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಮತ್ತೆ ಏರಿಕೆಯಾಗಿದೆ. 10,412 ಕ್ಯುಸೆಕ್ ನೀರು ಹರಿದು ಬರುತ್ತಿದ್ದು,8,354 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.

ADVERTISEMENT

ಇಂದೂ ಸಹ ಭಾರಿ ಮಳೆ ಬೀಳುವ ಮುನ್ನೆಚ್ಚರಿಕೆ ನೀಡಿರುವ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.