ADVERTISEMENT

ಮತಾಂತರಕ್ಕೆ ಯತ್ನ: ಗೋಣಿಕೊಪ್ಪಲಿನಲ್ಲಿ ಕೇರಳದ ದಂಪತಿ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 18 ಮೇ 2022, 15:48 IST
Last Updated 18 ಮೇ 2022, 15:48 IST
   

ಗೋಣಿಕೊಪ್ಪಲು: ‘ಗಿರಿಜನರಿಗೆ ಆಮಿಷವೊಡ್ಡಿ ಮತಾಂತರ ಮಾಡುತ್ತಿದ್ದಾರೆ’ ಎಂಬ ಆರೋಪದಡಿ ಕೇರಳದ ಕ್ರೈಸ್ತ ಮಿಷನರಿ ದಂಪತಿ ಕುರಿಯೇಚನ್ ಹಾಗೂ ಸೆಲಿಲಾಮ ಎಂಬುವರ ವಿರುದ್ಧ ಕುಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕುಟ್ಟ ಪೂಜಿಕಲ್ಲು ಬಳಿ ಗಿರಿಜನರನ್ನು ಮನವೊಲಿಸಿ ಮತಾಂತರಕ್ಕೆ ಯತ್ನಿಸುತ್ತಿದ್ದರು ಎನ್ನಲಾಗಿದೆ. ಇದನ್ನು ಗಮನಿಸಿದ ಬಜರಂಗದಳ ಮತ್ತು ಆರ್‌ಎಸ್‌ಎಸ್‌ ಕಾರ್ಯಕರ್ತರು ಕ್ರೈಸ್ತ ಮಿಷನರಿ ದಂಪತಿಯನ್ನು ತರಾಟೆ ತೆಗೆದುಕೊಂಡು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

‘ಆರೋಪಿಗಳ ವಿರುದ್ಧ ಮತಾಂತರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ’ ಎಂದು ಸಿಪಿಐ ಮಂಜಪ್ಪ ತಿಳಿಸಿದರು.

ADVERTISEMENT

ಬಾಡಗ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಪೆಮ್ಮಣಮಾಡ ನವೀನ್, ಬೂತ್ ಅಧ್ಯಕ್ಷ ಜಾಯ್ ಅಯ್ಯಪ್ಪ, ಕುಟ್ಟ ಗ್ರಾಮ ಪಂಚಾಯಿತಿ ಸದಸ್ಯೆ ತೀತಿರ ತೀರ್ಥ ಮಂಜುನಾಥ್, ಬಜರಂಗದಳದ ತಾಲ್ಲೂಕು ಸಂಚಾಲಕ ಸಜು ಗಣಪತಿ ಹಾಜರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.