ADVERTISEMENT

ಬನ್ನಿ ಅಮ್ಮ.. ಕಡಿಮೆ ಬೆಲೆ: ಸುಂಟಿಕೊಪ್ಪ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂತೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 4:00 IST
Last Updated 15 ಜನವರಿ 2026, 4:00 IST
ಸುಂಟಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಮಕ್ಕಳ ಸಂತೆ ನಡೆಯಿತು.
ಸುಂಟಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಮಕ್ಕಳ ಸಂತೆ ನಡೆಯಿತು.   

ಸುಂಟಿಕೊಪ್ಪ: ‘ಬನ್ನಿ ಸಾರ್, ಬನ್ನಿ ಅಮ್ಮ ಹಣ್ಣು ಹಂಪಲುಗಳಿಗೆ, ತರಕಾರಿಗಳಿಗೆ ಬೆಲೆ ಕಡಿಮೆ ಇದೆ. ಯಾವುದು ಬೇಕು ನೀವು ಆರಿಸಿಕೊಳ್ಳಿ ಬನ್ನಿ ಬನ್ನಿ..’

ಇದು ಯಾವುದೋ ಮಾರುಕಟ್ಟೆ ಅಥವಾ ಜಾತ್ರೆಯಲ್ಲಿ ಕಂಡು ಬಂದ ದೃಶ್ಯವಲ್ಲ. ಇದು ಸುಂಟಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಆಯೋಜಿಸಿದ್ದ ಮಕ್ಕಳ ಸಂತೆಯ ನೋಟಗಳು..

ಇಲ್ಲಿನ ಮಾದಾಪುರ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಮಕ್ಕಳ ಸಂತೆಯಲ್ಲಿ ಮಕ್ಕಳಿಗೆ ವ್ಯಾಪಾರ, ವಹಿವಾಟು ಜ್ಞಾನದ ಬಗ್ಗೆ ಅರಿವು ಮೂಡಿಸಲು ಶಿಕ್ಷಕರ ಮಾರ್ಗದರ್ಶನದಲ್ಲಿ  ತರಕಾರಿ,  ಹಣ್ಣು ಹಂಪಲುಗಳು, ಮನೆಯಿಂದ ತಯಾರಿಸಿದ ಖಾದ್ಯ ತಿನಿಸುಗಳನ್ನು ಗಳನ್ನು ಮಕ್ಕಳು ಮಾರಾಟ ಮಾಡಿದರು.  ಶಿಕ್ಚಕರು, ಪೋಷಕರು, ಸಾರ್ವಜನಿಕರು ಮಕ್ಕಳ ವ್ಯಾಪಾರ ಶೈಲಿಗೆ ಮನಸೋತು ವಸ್ತುಗಳನ್ನು ಖರೀದಿಸಿದರು.

 ಉದ್ಘಾಟಿಸಿ ಮಾತನಾಡಿದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಫೀಕ್ ಖಾನ್ , ‘ ಶಾಲೆಯಲ್ಲಿ ಪಠ್ಯ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿರದೆ,  ವ್ಯವಹಾರಿಕ ಜ್ಞಾನವನ್ನು ಬೆಳೆಸಿಕೊಳ್ಳುವ ದೃಷ್ಟಿಯಿಂದ  ಮಕ್ಕಳ ಸಂತೆ ಮೇಳವನ್ನು ಆಯೋಜಿಸಲಾಗಿದೆ’ ಎಂದರು.

ಗ್ರಾಮ ಪಂಚಾಯತಿ ಪಿಡಿಒ ಲೋಕೇಶ್ ಮಾತನಾಡಿ, ‘ಸರ್ಕಾರವು ಮಕ್ಕಳಿಗೆ ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗಳು ಹಾಗೂ ವ್ಯವಹಾರಿಕ ಜ್ಞಾನದ ಶಿಕ್ಷಣಕ್ಕೆ ಆಧ್ಯತೆ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಶಾಲಾ ಮುಖ್ಯ ಶಿಕ್ಷಕರು,ಶಿಕ್ಷಕರು , ಪೋಷಕರು ಇದ್ದರು.  ವ್ಯಾಪಾರ ಮಾಡಿ ಬಂದ ಹಣದಿಂದ ಪುಸ್ತಕ ಖರೀದಿ, ಪೋಷಕರಿಗೆ ನೀಡುವುದಾಗಿ ಮಕ್ಕಳು ತಿಳಿಸಿದರು.

ಸುಂಟಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಮಕ್ಕಳ ಸಂತೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT