
ವಿರಾಜಪೇಟೆ: ಸಮೀಪದ ಬಿಟ್ಟಂಗಾಲದ ಕೂರ್ಗ್ ಗಾಲ್ಫ್ ಲಿಂಕ್ಸ್‌ನಲ್ಲಿ ಮಲಚೀರ ಕುಟುಂಬಸ್ಥರ ಆತಿಥ್ಯದಲ್ಲಿ ಮುಕ್ತಾಯಗೊಂಡ 14ನೇ ವರ್ಷದ ಗಾಲ್ಫ್ ಟೂರ್ನಿ ಕೊಡಗು ಫ್ಯಾಮಿಲಿ ಕಪ್-2026ರ ಟೀಮ್ ಗ್ರಾಸ್ ಸ್ಟ್ರೋಕ್ ಪ್ಲೇ(0-18) ವಿಭಾಗದಲ್ಲಿ ಒಟ್ಟು 157 ಅಂಕಗಳಿಸುವ ಮೂಲಕ ಗಣೇಶ್ ಮಹೇಂದ್ರ ಮತ್ತು ಕೆ.ಪಿ. ರಂಜಿತ್ ಜೋಡಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿತು.
ಅಂತಿಮ ಹಣಾಹಣಿಯಲ್ಲಿ ತೀವ್ರ ಪೈಪೋಟಿ ನೀಡಿದ ಕೆ.ಕೆ. ಚಂಗಪ್ಪ ಮತ್ತು ಕೆ.ಯು. ವಿಕ್ರಾಂತ್ ಅವರನ್ನು ಒಳಗೊಂಡ ಕಂಜಿತಂಡ ತಂಡ ಟೂರ್ನಿಯ ರನ್ನರ್ಸ್ ಪ್ರಶಸ್ತಿ ಪಡೆದರು.
ಟೀಮ್ ಹ್ಯಾಂಡಿಕ್ಯಾಪ್ ಸ್ಟ್ರೋಕ್ ಪ್ಲೇ (0-18) ವಿಭಾಗದಲ್ಲಿ ಸಿ.ಬಿ. ಮುತ್ತಣ್ಣ ಮತ್ತು ಸಿ.ಎ. ಬೋಪಯ್ಯ ಅವರನ್ನು ಒಳಗೊಂಡ ಕೋದಂಡ ತಂಡ ಪ್ರಥಮ ಸ್ಥಾನ ಪಡೆದರೆ, ಸಿ.ಪಿ. ಕಾರ್ಯಪ್ಪ ಮತ್ತು ಕರ್ನಲ್ (ನಿವೃತ್ತ) ಸಿ.ಎಂ. ಅಪ್ಪಯ್ಯ ಅವರನ್ನು ಒಳಗೊಂಡ ಚೇನಂಡ ತಂಡ ದ್ವಿತೀಯ ಸ್ಥಾನ ಪಡೆಯಿತು.
ವೈಯಕ್ತಿಕ ಗ್ರಾಸ್ ಸ್ಟ್ರೋಕ್ ಪ್ಲೇ ವಿಭಾಗದಲ್ಲಿ ವರುಣ್ ಗಣಪತಿ ವಿನ್ನರ್ಸ್ ಪ್ರಶಸ್ತಿ ಪಡೆದರೆ, ಮಾಲಿ ಶಶಿಕಿರಣ್ ರನ್ನರ್ಸ್ ಪ್ರಶಸ್ತಿ ಪಡೆದರು. ವೈಯಕ್ತಿಕ ಹ್ಯಾಂಡಿಕ್ಯಾಪ್ ಸ್ಟ್ರೋಕ್ ಪ್ಲೇ (0-18) ವಿಭಾಗದಲ್ಲಿ ಬಿ.ಸಿ. ನಂಜಪ್ಪ ಪ್ರಥಮ ಸ್ಥಾನ ಪಡೆದರೆ, ಎಂ.ಜಿ. ಬೋಪಣ್ಣ ದ್ವಿತೀಯ ಸ್ಥಾನಗಳಿಸಿದರು. ವೈಯಕ್ತಿಕ ಹ್ಯಾಂಡಿಕ್ಯಾಪ್ ಸ್ಟೇಬಲ್ ಫೋರ್ಡ್ (19-24) ವಿಭಾಗದಲ್ಲಿ ನಿವೃತ್ತ ಮೇಜರ್ ಬಿ.ಎ. ನಂಜಪ್ಪ ವಿನ್ನರ್ಸ್ ಪ್ರಶಸ್ತಿ ಪಡೆದರೆ, ಸಿ.ಕೆ. ಪೂಣಚ್ಚ ರನ್ನರ್ ಆದರು.
ಹಿರಿಯರ ವಿಭಾಗದ ಹ್ಯಾಂಡಿಕ್ಯಾಪ್ ಸ್ಟೇಬಲ್ ಫೋರ್ಡ್ (0-24) ವಿಭಾಗದಲ್ಲಿ ಡಾ. ಟಿ.ಎನ್. ಅಚ್ಚಯ್ಯ ಪ್ರಥಮ ಸ್ಥಾನ ಪಡೆದರೆ, ಅತಿ ಹಿರಿಯರ ಸ್ಟೇಬಲ್ ಫೋರ್ಡ್ (0-24) ವಿಭಾಗದಲ್ಲಿ ನಿವೃತ್ತ ಮೇಜರ್ ಜನರಲ್ ಎಸ್. ಕೆ. ಕಾರ್ಯಪ್ಪ ಪ್ರಥಮ ಸ್ಥಾನ ಗಳಿಸಿದರು.
ಮಹಿಳೆಯರ ನೆಟ್ ಸ್ಟೇಬಲ್ ಫೋರ್ಡ್ (0-24) ವಿಭಾಗದಲ್ಲಿ ಅಲಿಷ ತಿಮ್ಮಯ್ಯ ಪ್ರಥಮ, ಕ್ಲೋಸೆಸ್ಟ್ ಟು ಪಿನ್ ವಿಭಾಗದಲ್ಲಿ ಎಂ.ಜಿ. ಬೋಪಣ್ಣ ಮೊದಲ ಸ್ಥಾನ ಹಾಗೂ ಸ್ಟ್ರೈಟೆಸ್ಟ್ ಡ್ರೈವ್ ವಿಭಾಗದಲ್ಲಿ ಸಿ.ಬಿ. ಮುತ್ತಣ್ಣ ಪ್ರಥಮ ಸ್ಥಾನ ಪಡೆದರು. ಟೂರ್ನಿಯ ಅತಿ ಹೆಚ್ಚು ಸಂಖ್ಯೆಯ 'ಪಾರ್ಸ್' ಗಳಿಸಿದ ಕೀರ್ತಿಗೆ ನಿಖಿಲ್ ಪೂವಯ್ಯ, ಅತಿ ಹೆಚ್ಚು ಸಂಖ್ಯೆಯ 'ಬರ್ಡೀಸ್' ಪಡೆದ ಹೆಗ್ಗಳಿಕೆಗೆ ವರುಣ್ ಗಣಪತಿ ಪಾತ್ರರಾದರು.
ಹಿರಿಯ ವೈದ್ಯ ಡಾ. ಮಲಚೀರ ಸಿ. ಸುಬ್ಬಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿವಿಧ ವಿಭಾಗದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಿದ್ದಾಪುರದ ಡಾ. ಎಂ.ಕೆ. ಅಯ್ಯಪ್ಪ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಮಲಚೀರ ಕುಟುಂಬದ ಎಂ. ಸಿ. ವಿಠಲ್, ಎಂ. ಸಿ. ನಾಣಯ್ಯ, ಎಂ.ಸಿ. ಬೋಸ್, ಎಂ.ಎಸ್. ಕಾರ್ಯಪ್ಪ, ಎಂ.ವಿ. ಕನ್ಮ ಕಾಳಯ್ಯ ಈ ಕೌಟುಂಬಿಕ ಗಾಲ್ಫ್ ಪಂದ್ಯಾವಳಿ ಆಯೋಜನೆಯ ಉಸ್ತುವಾರಿ ವಹಿಸಿದ್ದರು.
ಬಿಟ್ಟಂಗಾಲ ಕೂರ್ಗ್ ಗಾಲ್ಫ್ ಲಿಂಕ್ಸ್‌ನ ಕ್ಯಾಪ್ಟನ್ ಸಿ.ಬಿ. ಮುತ್ತಣ್ಣ, ಮಲಚೀರ ಕುಟುಂಬದ ರಾಬಿನ್, ಅನೀಶ್, ಜೀವನ್, ನಿಖಿಲ್, ಲಕ್ಷಿತ್ ಬಿದ್ದಪ್ಪ ಪ್ರತೀತ್, ಕೋಡಂದೆರ ತಿಮ್ಮಯ್ಯ, ಉತ್ತರೆ ತಿಮ್ಮಯ್ಯ, ಡಾ. ಬಿಜ್ಜoಡ ಕಾರ್ಯಪ್ಪ, ಜಾನಕಿ ಕಾರ್ಯಪ್ಪ, ಬಿ. ರಾಬಿನ್, ಮಾನಸ ಸೇರಿದಂತೆ ಕೂರ್ಗ್ ಗಾಲ್ಫ್ ಲಿಂಕ್ಸ್‌ನ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಎರಡು ದಿನಗಳ ಈ ಟೂರ್ನಿಯಲ್ಲಿ ಒಟ್ಟು 70 ತಂಡಗಳು ಸೇರಿದಂತೆ 170ಕ್ಕೂ ಹೆಚ್ಚು ಗಾಲ್ಫ್ ಆಟಗಾರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.