ADVERTISEMENT

ಫೆ. 24ರಂದು ಮಡಿಕೇರಿಯಲ್ಲಿ ‘ಕೊಡಗು ಜಾನಪದ ಬೆಡಗು’

ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2025, 4:19 IST
Last Updated 22 ಫೆಬ್ರುವರಿ 2025, 4:19 IST
   

ಮಡಿಕೇರಿ: ಕರ್ನಾಟಕ ಜಾನಪದ ಅಕಾಡೆಮಿ ಮತ್ತು ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಕಾಲೇಜಿನಲ್ಲಿ ಫೆ. 24ರಂದು ಬೆಳಿಗ್ಗೆ 10.30ಕ್ಕೆ ‘ಕೊಡಗು ಜಾನಪದ ಬೆಡಗು’ ಕಾರ್ಯಕ್ರಮ ನಡೆಯಲಿದೆ.

‘ಕಾರ್ಯಕ್ರಮವನ್ನು ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಉದ್ಘಾಟಿಸಲಿದ್ದು, ಅಕಾಡೆಮಿ ಸದಸ್ಯ ಮೈಸೂರು ಉಮೇಶ್, ರಿಜಿಸ್ಟ್ರಾರ್ ಎನ್.ನಮ್ರತಾ, ಐಕ್ಯೂಎಸಿ ಸಂಚಾಲಕರಾದ ಕೆ.ಡಿ.ನಿರ್ಮಲಾ, ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯ ಅಂಬೇಕಲ್ ನವೀನ್, ಕನ್ನಡ ಉಪನ್ಯಾಸಕ ಮೋಹನ್ ಕುಮಾರ್ ಭಾಗವಹಿಸಲಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಪಿ.ಕೆ.ವೆಂಕಟೇಶಪ್ರಸನ್ನ ಅಧ್ಯಕ್ಷತೆ ವಹಿಸಲಿದ್ದಾರೆ.’ ಎಂದು ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಕಾವೇರಿ ಪ್ರಕಾಶ್ ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಉಪನ್ಯಾಸಕ ಮೋಹನ್‌ಕುಮಾರ್ ಮಾತನಾಡಿ, ‘ಉದ್ಘಾಟನಾ ಕಾರ್ಯಕ್ರಮದ ನಂತರ ನಡೆಯುವ ವಿಚಾರ ಸಂಕಿರಣದಲ್ಲಿ ಸಹ ಪ್ರಾಧ್ಯಾಪಕಿ ಕಾವೇರಿ ಪ್ರಕಾಶ್ ಅವರು ‘ಕೊಡಗಿನ ಸಾಂಪ್ರದಾಯಿಕ ಊಟೋಪಚಾರಗಳು’ ಎಂಬ ವಿಷಯ ಕುರಿತು ಹಾಗೂ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಮುತ್ತಪ್ಪ ಅವರು ‘ಬುಡಕಟ್ಟು ಸಂಸ್ಕೃತಿಯಲ್ಲಿ ಕುಡಿಯರು’ ವಿಷಯವಾಗಿ ಮಾತನ್ನಾಡಲಿದ್ದಾರೆ’ ಎಂದು ಹೇಳಿದರು.

ADVERTISEMENT

ಕಾರ್ಯಕ್ರಮದಲ್ಲಿ ಇದರ ಜೊತೆಗೆ, ಕಡ್ಲೇರ ತುಳಸಿ ಮೋಹನ್‌ ಮತ್ತು ತಂಡದವರು ‘ಸುಗ್ಗಿ ಕುಣಿತ’ವನ್ನು ವಿಷ್ಣುಪ್ರಿಯ ಮತ್ತು ತಂಡದವರು ‘ಕೊಡವ ಜನಪದ ನೃತ್ಯ’ವನ್ನು ಪ್ರದರ್ಶಿಸಲಿದ್ದಾರೆ’ ಎಂದು ಅವರು ತಿಳಿಸಿದರು.

ಕಾಲೇಜಿನ ಸಹಪ್ರಾಧ್ಯಾಪಕಿ ಚೈತ್ರಾ, ವಿದ್ಯಾರ್ಥಿಗಳಾದ ವಿಷ್ಣುಪ್ರಿಯಾ, ಯೋಗೇಶ್, ಸುಹಾನ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.