ADVERTISEMENT

ಗೋಣಿಕೊಪ್ಪಲು: ಭಾರಿ ಮಳೆಗೆ ದೇವಸ್ಥಾನ ತಡೆಗೋಡೆ ಕುಸಿತ

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 3:48 IST
Last Updated 27 ಜೂನ್ 2025, 3:48 IST
ಗೋಣಿಕೊಪ್ಪಲು ಬಳಿಯ ಚಿಕ್ಕಮಂಡೂರು ಭಗವತಿ ದೇವಸ್ಥಾನದ ತಡೆಗೋಡೆ ಕುಸಿದಿರುವುದು
ಗೋಣಿಕೊಪ್ಪಲು ಬಳಿಯ ಚಿಕ್ಕಮಂಡೂರು ಭಗವತಿ ದೇವಸ್ಥಾನದ ತಡೆಗೋಡೆ ಕುಸಿದಿರುವುದು   

ಗೋಣಿಕೊಪ್ಪಲು: ಮಳೆಯಿಂದಾಗಿ ಪೊನ್ನಂಪೇಟೆ ತಾಲ್ಲೂಕು ಚಿಕ್ಕಮಂಡೂರಿನ ಭಗವತಿ ದೇವಸ್ಥಾನ ತಡೆಗೋಡೆ ಬುಧವಾರ ಕುಸಿದು ಬಿದ್ದಿದೆ.

ಚಿಕ್ಕಮಂಡೂರು ಸೇರಿದಂತೆ ಮುಗುಟಗೇರಿ, ಬಲ್ಯಮಂಡೂರು, ನಡಿಕೇರಿ, ಬೇಗೂರು ಭಾಗಕ್ಕೆ ಒಂದೇ ದಿನದಲ್ಲಿ 8 ಇಂಚು ಮಳೆ ಸುರಿದಿತ್ತು. ಇದರಿಂದ ದೇವಸ್ಥಾನದ ಆವರಣದಲ್ಲಿ ಜಲ ಎದ್ದಿದ್ದು, ಈ ನೀರು ತಡೆ ಗೋಡೆಯನ್ನು ಭೇದಿಸಿಕೊಂಡು ಹೊರಬಂದಿದೆ. ಈ ವೇಳೆಯಲ್ಲಿ ಅತಿಯಾದ ಶೀತದಿಂದ ತಡೆಗೋಡೆ ಕುಸಿದು ಬಿದ್ದಿದೆ ಎಂದು ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕಳ್ಳಿಚಂಡ ಉಮೇಶ್ ಕರುಂಬಯ್ಯ ಹೇಳಿದರು.

ನೂರಾರು ವರ್ಷಗಳ ಹಳೆಯದಾದ ದೇವಸ್ಥಾನವನ್ನು 3 ವರ್ಷದ ಹಿಂದೆ ಗ್ರಾಮಸ್ಥರು ಹಾಗೂ ದಾನಿಗಳ ನೆರವಿನಿಂದ ₹70 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿತ್ತು. ತಡೆಗೋಡೆ ನಿರ್ಮಾಣಕ್ಕೆ ₹10 ವೆಚ್ಚ ಮಾಡಲಾಗಿತ್ತು. ಅತಿಯಾದ ಮಳೆಯಿಂದ ಎಲ್ಲವೂ ಈಗ ಹಾಳಾಗಿದೆ’ ಎಂದು ಅವರು ಹೇಳಿದರು.

ADVERTISEMENT

ಕುಸಿದ ತಡೆಗೋಡೆಯನ್ನು ಮರು ನಿರ್ಮಾಣ ಮಾಡಿಕೊಡಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.