ADVERTISEMENT

ಕೊಡವ ಕೌಟುಂಬಿಕ ಹಾಕಿ: 26ರಿಂದ ಚಾಂಪಿಯನ್ಸ್ ಟ್ರೋಫಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 0:20 IST
Last Updated 16 ಡಿಸೆಂಬರ್ 2025, 0:20 IST
<div class="paragraphs"><p>ಹಾಕಿ</p></div>

ಹಾಕಿ

   

ಮಡಿಕೇರಿ: ಇದುವರೆಗಿನ ಕೊಡವ ಕೌಟುಂಬಿಕ ಹಾಕಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಗಳಿಗಾಗಿ ‘ಲೆವಿಷ್ಠಾ ಚಾಂಪಿಯನ್ಸ್ ಟ್ರೋಫಿ’ಯು ಡಿ. 26ರಿಂದ 30ರವರೆಗೆ ಇಲ್ಲಿನ ಮೂರ್ನಾಡು ಗ್ರಾಮದ ದಿವಂಗತ ಬಾಚೆಟ್ಟೀರ ಲಾಲೂಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ.

‘ಕುಟ್ಟಪ್ಪ ಕುಟ್ಟಣಿ ಹಾಗೂ ಸೋದರ ಕಾಶಿ ಅವರಿಂದ ಕರಡದಲ್ಲಿ 1997ರಲ್ಲಿ ಕೊಡವ ಕೌಟುಂಬಿಕ ಹಾಕಿ ಟೂರ್ನಿ ಆರಂಭವಾಯಿತು. ಇಲ್ಲಿಯವರೆಗೆ ಒಟ್ಟು 25 ಆವೃತ್ತಿಯ ಟೂರ್ನಿಗಳು ಜರುಗಿವೆ. ಅವುಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಗಳಿಗೆ ಟ್ರೋಫಿ ನಡೆಯಲಿದೆ’ ಎಂದು ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘13 ಕುಟುಂಬಗಳ ತಂಡಗಳು ಭಾಗಿಯಾಗಲಿವೆ. ಮೊದಲ ಬಹುಮಾನ ₹ 2 ಲಕ್ಷ, ದ್ವಿತೀಯ ಬಹುಮಾನ ₹ 1 ಲಕ್ಷ, ಸೆಮಿಫೈನಲ್‌ಗೆ ಅರ್ಹತೆ ಪಡೆದ ತಂಡಕ್ಕೆ ₹ 50 ಸಾವಿರ, ಟೂರ್ನಿಯಲ್ಲಿ ಭಾಗವಹಿಸಿದ ಎಲ್ಲ ತಂಡಗಳಿಗೂ ₹ 25 ಸಾವಿರ ಬಹುಮಾನ ನೀಡಲಾಗುವುದು’ ಎಂದರು.

‘ಕೊಡವ ಹಾಕಿ ಅಕಾಡೆಮಿ, ಹಾಕಿ ಕೂರ್ಗ್ ಸಂಸ್ಥೆ, ಎಂ.ಬಾಡಗ ಸ್ಪೋರ್ಟ್ಸ್ ರಿಕ್ರೀಯೇಷನ್ ಸಂಸ್ಥೆ ಹಾಗೂ ಮೂರ್ನಾಡು ವಿದ್ಯಾಸಂಸ್ಥೆಯ ಸಹಯೋಗದಲ್ಲಿ ಈ ಟೂರ್ನಿ ಆಯೋಜಿಸಲಾಗುತ್ತಿದೆ‘ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.