
ಗೋಣಿಕೊಪ್ಪಲು (ಕೊಡಗು ಜಿಲ್ಲೆ): ಇಲ್ಲಿನ ಕುಟ್ಟದಲ್ಲಿ ಶನಿವಾರ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಬ ಗೌರವ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.
ಕುಟ್ಟ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹಾಗೂ ಕುಟ್ಟ ಕೊಡವ ಸಮಾಜಕ್ಕೆ ಜಾಗ ದಾನ ನೀಡಿದ ಮುಕ್ಕಾಟಿರ ರಾಜ ಮಂದಣ್ಣ ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ನೀಡಿದರು.
‘ಕೊಡವ ಸಂಸ್ಕೃತಿ ಮುಂದಿನ ತಲೆಮಾರಿಗೂ ಉಳಿಯಲಿ’ ಎಂದು ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಆಶಿಸಿದರು.
‘ಕೊಡವ ಭಾಷೆ, ಆಚಾರ, ವಿಚಾರ, ಸಂಸ್ಕೃತಿ, ಪರಂಪರೆ ಉಳಿಸಲು ಉಳಿಸುವಲ್ಲಿ, ಕೊಡವ ಭಾಷಿಕರಾದ 23 ಸಮಾಜಗಳನ್ನು ಒಟ್ಟುಗೂಡಿಸಿ ಅಕಾಡೆಮಿ ಮುನ್ನಡೆಯುತ್ತಿರುವುದು ವಿಶೇಷ’ ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಶ್ಲಾಘಿಸಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ‘ಕೊಡವ ಸಾಹಿತ್ಯವೊಂದೇ ಕೊಡವ ಸಂಸ್ಕೃತಿಯ ಆಧಾರ ಸ್ತಂಭವಾಗಿದೆ’ ಎಂದು ಹೇಳಿದರು.
ಕೊಡವ ಸಂಸ್ಕೃತಿ ಗುಣ-ಲಕ್ಷಣ ಮತ್ತು ನೀತಿ-ನಡತೆ’ ಕುರಿತು ಅಭಿಮನ್ಯು ಫೌಂಡೇಷನ್ ಅಧ್ಯಕ್ಷ, ಖ್ಯಾತ ಅಂತರಾಪ್ಟ್ರೀಯ ಕ್ರೀಡಾಪಟು ತೀತಮಡ ಅರ್ಜುನ್ ದೇವಯ್ಯ, ‘ಕೊಡವ ಭಾಷೆ ಸಂರಕ್ಷಣೆಯಲ್ಲಿ ಜನಾಂಗದವರ ಜವಾಬ್ದಾರಿ’ ಕುರಿತು ಡಾ.ತೀತಿರ ರೇಖಾ ವಸಂತ ವಿಚಾರ ಮಂಡಿಸಿದರು.
‘ಕೊಡವ ಪುಸ್ತಕ ಪತ್ತಾಯ(ಪುಸ್ತಕ ಭಂಡಾರ)’ವನ್ನು ಕುಟ್ಟ ಕೊಡವ ಸಮಾಜದಲ್ಲಿ ಆರಂಭಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.