
ಪ್ರಜಾವಾಣಿ ವಾರ್ತೆಕುಶಾಲನಗರ: ಸಮೀಪದ ಕೂಡಿಗೆ ಯೂನಿಯನ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ನಿರುದ್ಯೋಗಿ ಯುವಕ ಯುವತಿಯರಿಗೆ ಊಟ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿ ಸ್ವ-ಉದ್ಯೋಗ ತರಬೇತಿಗಳನ್ನು ನೀಡಲಾಗುತ್ತಿದೆ.
ಅರ್ಜಿ ಸಲ್ಲಿಸಲು 18 ರಿಂದ 50 ವರ್ಷ ವಯೋಮಿತಿಯೊಳಗಿನ ಯುವಕ - ಯುವತಿಯರಿಗೆ ಮಾತ್ರ ಅವಕಾಶವಿದೆ. ಅರ್ಜಿ ಸಲ್ಲಿಸಬಹುದು. ನ.26 ರಿಂದ ಡಿ.26ರ ವರೆಗೆ ಮಹಿಳೆಯರ ಹೊಲಿಗೆ ತರಬೇತಿ 31 ದಿನಗಳು, ಡಿ.1ರಿಂದ ಡಿ.30 ರವರೆಗೆ ಉಚಿತ ಮೊಬೈಲ್ ರಿಪೇರಿ ತರಬೇತಿ 30 ದಿನಗಳು, ಡಿ.15 ರಿಂದ 26 ರವರೆಗೆ ಉಚಿತ ಫಾಸ್ಟ್ ಫುಡ್ ತಯಾರಿಕೆ ತರಬೇತಿ 12 ದಿನಗಳು ಹಾಗೂ ಜ.15 ರಿಂದ ಫೆ.18 ರವರೆಗೆ ಉಚಿತ ಬ್ಯೂಟಿ ಪಾರ್ಲರ್ ತರಬೇತಿ 35 ದಿನಗಳ ಕಾಲ ತರಬೇತಿ ನೀಡಲಾಗುತ್ತದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊ: 9686406181, 9449402081, 8618471801, 9900142602 ಸಂಪರ್ಕಿಸಲು ಸಂಸ್ಥೆಯ ನಿರ್ದೇಶಕ ಪ್ರಕಾಶ್ ಕುಮಾರ್ ತಿಳಿಸಿದ್ದಾರೆ.