ವಿರಾಜಪೇಟೆ: ಓಣಂ ಹಿನ್ನೆಲೆಯಲ್ಲಿ ಮದ್ಯ ಸಾಗಾಟಕ್ಕೆ ಕಡಿವಾಣ ಹಾಕಲು ಪೆರುಂಬಾಡಿಯ ಚೆಕ್‌ಪೋಸ್ಟ್ ಬಳಿ ಕರ್ನಾಟಕ ಹಾಗೂ ಕೇರಳ ರಾಜ್ಯಗಳ ಅಬಕಾರಿ ಇಲಾಖೆಯ ಅಧಿಕಾರಿಗಳ ತಂಡ ಮಂಗಳವಾರ ವಾಹನಗಳ ತಪಾಸಣೆ ನಡೆಸಿತು.
ವಿರಾಜಪೇಟೆಯ ಅಬಕಾರಿ ಉಪ ಅಧೀಕ್ಷಕ ವಿ.ಚಂದ್ರಪ್ಪ ನೇತೃತ್ವದಲ್ಲಿ ಉಪ ವಿಭಾಗ ಮತ್ತು ಪೆರಂಬಾಡಿಯ ಅಬಕಾರಿ ಠಾಣೆ ಅಧಿಕಾರಿಗಳು ಹಾಗೂ ಕೇರಳ ರಾಜ್ಯದ ಇರಟಿಯ ಅಬಕಾರಿ ಇಲಾಖೆ ಅಧಿಕಾರಿಗಳ ತಂಡ ಜಂಟಿಯಾಗಿ ಕಾರ್ಯಾಚರಣೆ ನಡೆಸಿದರು.
ರಾಜ್ಯದಿಂದ ಕೇರಳದ ಕಡೆ ಸಾಗುವ ಹಾಗೂ ಕೇರಳದಿಂದ ರಾಜ್ಯವನ್ನು ಪ್ರವೇಶಿಸುವ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.