ADVERTISEMENT

ಸುಂಟಿಕೊಪ್ಪ: ದೇವಿಗೆ ದ್ರಾಕ್ಷಿ, ಗೋಡಂಬಿ ಅಲ‌ಕಾರ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2025, 5:50 IST
Last Updated 1 ಅಕ್ಟೋಬರ್ 2025, 5:50 IST
ಸುಂಟಿಕೊಪ್ಪ ಚಾಮುಂಡೇಶ್ವರಿ ದೇವಾಲಯದಲ್ಲಿ ನವರಾತ್ರಿಯ ಒಂಬತ್ತನೇ ದಿನವಾದ ಮಂಗಳವಾರ ದೇವಿಗೆ ದ್ರಾಕ್ಷಿ, ಗೋಡಂಬಿ ಅಲಂಕಾರ ಮಾಡಲಾಗಿತ್ತು
ಸುಂಟಿಕೊಪ್ಪ ಚಾಮುಂಡೇಶ್ವರಿ ದೇವಾಲಯದಲ್ಲಿ ನವರಾತ್ರಿಯ ಒಂಬತ್ತನೇ ದಿನವಾದ ಮಂಗಳವಾರ ದೇವಿಗೆ ದ್ರಾಕ್ಷಿ, ಗೋಡಂಬಿ ಅಲಂಕಾರ ಮಾಡಲಾಗಿತ್ತು   

ಸುಂಟಿಕೊಪ್ಪ: ಇಲ್ಲಿನ ಚಾಮುಂಡೇಶ್ವರಿ ದೇವಾಲಯದಲ್ಲಿ ಒಂಬತ್ತನೇ ದಿನವಾದ ಮಂಗಳವಾರ ಬೆಳಿಗ್ಗೆ ಶುದ್ಧ ಪೂಜೆ, ದೇವಿಗೆ ನೈವೇದ್ಯ ಪೂಜೆ, ಹೂವಿನ ಅಲಂಕಾರ, ಆರತಿ ಪೂಜೆ, ತುಪ್ಪದ ಆರತಿ ನಡೆಯಿತು.

ದೇವಾಲಯದ ಪ್ರಧಾನ ಅರ್ಚಕ ಮಂಜುನಾಥ್ ಉಡುಪ ಅವರ ನೇತೃತ್ವದಲ್ಲಿ ಸಂಜೆ ಶುದ್ಧ ಪೂಜೆ, ವಿಶೇಷ ಪೂಜೆಯ ನಂತರ ದೇವಿಗೆ ಗೋಡಂಬಿ ದ್ರಾಕ್ಷಿ ಅಲಂಕಾರ ಮಾಡುವುದರ ಮೂಲಕ ದೇವಾಲಯದಲ್ಲಿ ಭಕ್ತರಿಗೆ ಪೂಜೆಗೆ ಅವಕಾಶ ನೀಡಲಾಯಿತು. ರಾತ್ರಿ ಮಹಾಪೂಜೆ, ಆರತಿ ಪೂಜೆ, ದೀಪರಾಧನೆ ನಡೆಯಿತು.

ಹೋಬಳಿ ವ್ಯಾಪ್ತಿಯ ವಿವಿಧ‌ ಕಡೆಗಳಿಂದ‌ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ರಾತ್ರಿ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.