ADVERTISEMENT

ಮಾರ್ಚ್ 9ಕ್ಕೆ ಕುಶಾಲನಗರದಲ್ಲಿ ಯುವ ಸಾಹಿತ್ಯ ಸಮ್ಮೇಳನ

ಪ್ರಥಮ ಭಾರಿಗೆ ಕನ್ನಡ ಸಾಹತ್ಯ ಪರಿಷತ್‌ ವತಿಯಿಂದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2019, 12:31 IST
Last Updated 7 ಮಾರ್ಚ್ 2019, 12:31 IST
ಲಾಂಛನ
ಲಾಂಛನ   

ಮಡಿಕೇರಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಮಾರ್ಚ್ 9ರಂದು ಕುಶಾಲನಗರದ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಜಿಲ್ಲೆಯ ಪ್ರಥಮ ಯುವ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ತಿಳಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆ 8.30ಕ್ಕೆ ರಾಷ್ಟ್ರಧ್ವಜವನ್ನು ಕುಶಾಲನಗರ ಡಿವೈಎಸ್‌ಪಿ ಮುರಳೀಧರ್, ನಾಡಧ್ವಜದ ಧ್ವಜಾರೋಹಣವನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಲತೀಫ್ ಅವರು ನೆರವೇರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಮೆರವಣಿಗೆ: ಬೆಳಿಗ್ಗೆ 9ಕ್ಕೆ ವಿದ್ಯಾರ್ಥಿಗಳು ಹಾಗೂ ವಿವಿಧ ಕಲಾ ತಂಡಗಳು ಕುಶಾಲನಗರದ ಕಾರ್ಯಪ್ಪ ವೃತ್ತದಿಂದ ಪಾಲಿಟೆಕ್ನಿಕ್ ಕಾಲೇಜು ಆವರಣದ ತನಕ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಮೆರವಣಿಗೆಗೆ ಉದ್ಯಮಿ ನಾಗೇಂದ್ರ ಪ್ರಸಾದ್ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ದ್ವಾರಗಳಿಗೆ ಚಾಲನೆ: ಬೆಳಿಗ್ಗೆ 10ರ ನಂತರ ಸರ್‌ ಎಂ. ವಿಶ್ವೇಶ್ವರಯ್ಯ ದ್ವಾರವನ್ನು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾರತಿ ಉದ್ಘಾಟಿಸಲಿದ್ದಾರೆ. ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ ಸದಸ್ಯೆ ಪುಷ್ಪಾ ಹಾಗೂ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ADVERTISEMENT

ಸಮ್ಮೇಳನದ ಕಾವೇರಿ ಸಭಾಂಗಣದ ಉದ್ಘಾಟನೆಯನ್ನು ಪಾಲೆಟೆಕ್ನಿಕ್ ಕಾಲೇಜಿನ ಎಚ್.ಎಸ್. ಶಿವಪ್ಪ ನಿರ್ವಹಿಸಲಿದ್ದಾರೆ. ಈ ಸಂದರ್ಭ ಇಲ್ಲಿನ ಎಂಜಿನಿಯರ್ ಕಾಲೇಜು ಪ್ರಾಂಶುಪಾಲರಾದ ವೆಂಕಟೇಶ್ ಬೆಮ್ಮತ್ತಿ ಭಾಗವಹಿಸಿಸಲಿದ್ದಾರೆ ಎಂದು ವಿವರಿಸಿದರು.

ವೇದಿಕೆ ಕಾರ್ಯಕ್ರಮ: ಬೆಳಿಗ್ಗೆ 10.30ಕ್ಕೆ ಪ್ರಾರಂಭವಾಗುವ ವೇದಿಕೆ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಚಾಲನೆ ನೀಡಲಿದ್ದಾರೆ. ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್‌, ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಬೋಜೇಗೌಡ, ಸಂಸದ ಪ್ರತಾಪ್‌ ಸಿಂಹ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯಿ, ರಾಜೇಶ್‌ನಾಥ್ ಗುರೂಜಿ, ಕುಶಾಲನಗರ ಕಸಾಪ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ, ಜಾನಪದ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ.ಜಿ. ಅನಂತಶಯನ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಬೆಳಿಗ್ಗೆ 11ಕ್ಕೆ ಯುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಕಾಜೂರು ಸತೀಶ್ ವಹಿಸಲಿದ್ದಾರೆ. ಚಮ್ಮಟ್ಟೀರ ಪ್ರವೀಣ್, ಸಾಹಿತಿ ತೀರ್ಥೆಶ್, ರಮ್ಯಾ ಮೂರ್ನಾಡು, ಜಗದೀಶ್, ಲೀಲಾ ಕುಮಾರಿ ತೋಡಿಕಾನ ಭಾಗವಹಿಸಲಿದ್ದಾರೆ. ಯುವ ಕವಿಗಳಿಂದ ಕವನ ವಾಚನ ನಡೆಯಲಿದೆ ಎಂದು ಲೋಕೇಶ್ ತಿಳಿಸಿದರು.

ಮಧ್ಯಾಹ್ನ 12ರಿಂದ 1.30ರವರೆಗೆ ನಡೆಯುವ ಅಂತರ್ ಕಾಲೇಜು ಭಾವಗೀತೆ ಸ್ಪರ್ಧೆ ನಡೆಯಲಿದೆ. 1.30ರ ನಂತರ ನಡೆಯುವ ಭಾವ ಸಂಗಮ ಕಾರ್ಯಕ್ರಮಕ್ಕೆ ಗಾಯಕ ರೆಜಿತ್‌ ಕುಮಾರ್ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಮಧ್ಯಾಹ್ನ 3ರಿಂದ ನಡೆಯುವ ಸಮಾರೋಪ ಸಮಾರಂಭದಲ್ಲಿ ಬೆಂಗಳೂರಿನ ಡಿಸಿಪಿ ರವಿ ಚನ್ನಣ್ಣನವರ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್‌ ಡಿ. ಪನ್ನೇಕರ್‌, ಟಿ.ವಿ ನಿರೂಪಕ ಬೋಪಯ್ಯ, ಮುಖಂಡ ಸಂಕೇತ್‌ ಪೂವಯ್ಯ, ಕುಶಾಲನಗರ ಕೂರ್ಗ್‌ ಜಂಗಲ್ ಕಿಡ್ಸ್ ರೆಸಾರ್ಟ್ ಕೆ.ಕೆ. ಮಂಜುನಾಥ್‌ ಕುಮಾರ್‌, ಸಾಹಿತಿ ಭಾರದ್ವಾಜ್ ಆನಂದ ತೀರ್ಥ, ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷ ಎಂ.ವಿ. ವಿಜಯ, ಎಚ್.ಆರ್. ಶ್ರೀನಿವಾಸ್‌, ಮಂಜುಳಾ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಪರಿಷತ್ತಿನ ಪದಾಧಿಕಾರಿಗಳಾದ ಕುಡೇಕಲ್ ಸಂತೋಷ್‌, ಮುರಳೀಧರ್‌, ಕವನ್ ಕಾರ್ಯಪ್ಪ, ಕೆ.ಕೆ. ನಾಗರಾಜ್ ಶೆಟ್ಟಿ, ಕೋಡಿ ಚಂದ್ರಶೇಖರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.