ADVERTISEMENT

ಕೊಡಗಿನಲ್ಲಿ ಮುಂದುವರಿದ ಸಾಧಾರಣ ಮಳೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2024, 0:29 IST
Last Updated 31 ಆಗಸ್ಟ್ 2024, 0:29 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶುಕ್ರ ವಾರ ಸಾಧಾರಣ ಮಳೆ ಮುಂದುವರಿ ದಿದೆ. ಶೀತಗಾಳಿ ಜೋರಾಗಿ ಬೀಸುತ್ತಿದೆ.

ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಭಾಗಮಂಡಲ, ಮಡಿಕೇರಿ ಹಾಗೂ ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿಯಲ್ಲಿ ತಲಾ 3 ಸೆಂ.ಮೀನಷ್ಟು ಮಳೆಯಾಗಿದೆ.

ADVERTISEMENT

ಧರೆಗುರುಳಿದ ಮರ; ವಾಹನ ಜಖಂ

ಹೊಸಪೇಟೆ (ವಿಜಯನಗರ)– ನಗರದಲ್ಲಿ ಶುಕ್ರವಾರ ಸಂಜೆ ಸುಂಟರಗಾಳಿ ರೂಪದ ಗಾಳಿ ಕೆಲ ಕ್ಷಣ ಬೀಸಿದ್ದರಿಂದ ಪಟೇಲ್‌ ನಗರದಲ್ಲಿ ಬೃಹತ್ ಮರ ಉರುಳಿ ಬಿತ್ತು. ಅದರಡಿ ಸಿಲುಕಿದ ಆಟೊದಲ್ಲಿದ್ದ ಇಬ್ಬರಿಗೆ ಯಾವುದೇ ಅಪಾಯ ಆಗಲಿಲ್ಲ. ನಂತರ ಸುರಿದ ಭಾರಿ ಮಳೆಯಿಂದ ಕೆಲ ಮನೆಗಳಿಗೆ ನೀರು ನುಗ್ಗಿತು.

ಪಟೇಲ್‌ ನಗರದಲ್ಲಿ ಮರಬಿದ್ದು ಹಲವು ಮನೆಗಳಿಗೆ ವಿದ್ಯುತ್ ಪೂರೈಕೆ ಬಂದ್ ಆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.