ADVERTISEMENT

ಬೆಟ್ಟಗೇರಿ: ಮಣ್ಣು ಪರೀಕ್ಷಾ ಅಭಿಯಾನ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 15:13 IST
Last Updated 29 ಫೆಬ್ರುವರಿ 2024, 15:13 IST
ನಾಪೋಕ್ಲು ಸಮೀಪದ ಬೆಟ್ಟಗೇರಿಯಲ್ಲಿ ಭಾರತ ಸರ್ಕಾರದ ಕಾಫಿ ಮಂಡಳಿ ಮತ್ತು ಬೆಟ್ಟಗೇರಿಯ ವ್ಯವಸಾಯ ಸಹಕಾರಿ ಬ್ಯಾಂಕಿನ ಜಂಟಿ ಆಶ್ರಯದಲ್ಲಿ ಸಂಚಾರಿ ಮಣ್ಣು ಪರೀಕ್ಷಾ ಅಭಿಯಾನ ನಡೆಯಿತು
ನಾಪೋಕ್ಲು ಸಮೀಪದ ಬೆಟ್ಟಗೇರಿಯಲ್ಲಿ ಭಾರತ ಸರ್ಕಾರದ ಕಾಫಿ ಮಂಡಳಿ ಮತ್ತು ಬೆಟ್ಟಗೇರಿಯ ವ್ಯವಸಾಯ ಸಹಕಾರಿ ಬ್ಯಾಂಕಿನ ಜಂಟಿ ಆಶ್ರಯದಲ್ಲಿ ಸಂಚಾರಿ ಮಣ್ಣು ಪರೀಕ್ಷಾ ಅಭಿಯಾನ ನಡೆಯಿತು   

ನಾಪೋಕ್ಲು: ಭಾರತ ಸರ್ಕಾರದ ಕಾಫಿ ಮಂಡಳಿ ಮತ್ತ ಬೆಟ್ಟಗೇರಿಯ ವ್ಯವಸಾಯ ಸಹಕಾರಿ ಬ್ಯಾಂಕಿನ ಜಂಟಿ ಆಶ್ರಯದಲ್ಲಿ ಸಂಚಾರಿ ಮಣ್ಣು ಪರೀಕ್ಷಾ ಅಭಿಯಾನದ ಮೂಲಕ ಮಣ್ಣು ಪರೀಕ್ಷಾ ಕಾರ್ಯಕ್ರಮವನ್ನು ಬ್ಯಾಂಕಿನ ಸಭಾಂಗಣದಲ್ಲಿ ಬುಧವಾರ ನಡೆಸಲಾಯಿತು.

ಕಾಫಿ ಬೆಳೆಗಾರರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ರೈತರ ಕಾಫಿ ತೋಟದ ಮಣ್ಣಿನ ಪರೀಕ್ಷಾ ಕಾರ್ಯಕ್ರಮವನ್ನು ಭಾರತೀಯ ಕಾಫಿ ಮಂಡಳಿಯ ನಿರ್ದೇಶಕ ತಳೂರು ಕಿಶೋರ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭ ಉಪಸ್ಥಿತರಿದ್ದ ಕೆವಿಕೆ ವಿಜ್ಞಾನಿಗಳು ಕಾಫಿ ತೋಟ, ಕಾಳುಮೆಣಸಿನ ಕೃಷಿಗೆ ಹಾಕುವ ರಸಗೊಬ್ಬರ ಕೀಟನಾಶಕಗಳ ಬಗ್ಗೆ ರೈತರಿಗೆ ಸಮಗ್ರ ಮಾಹಿತಿಯನ್ನು ನೀಡಿ ಮಾರ್ಗದರ್ಶನ ನೀಡಿದರು.

ADVERTISEMENT

ಕಾರ್ಯಕ್ರಮದಲ್ಲಿ ಕಾಫಿ ಮಂಡಳಿ ಉಪನಿರ್ದೇಶಕ ಚಂದ್ರಶೇಖರ, ಬೆಟ್ಟಗೇರಿ ವಿಎಸ್ಎಸ್ಎನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಶೀಲಾ ರೈ, ನಿವೃತ ಶಿಕ್ಷಕ ಕೆದಂಬಾಡಿ ಪುಟ್ಟಯ್ಯ ಹಾಗೂ ಕಾಫಿ ಬೆಳೆಗಾರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.