ಕುಶಾಲನಗರ: ಇಲ್ಲಿನ ಬಸವನಹಳ್ಳಿ ಕೆಎಸ್ಆರ್‌ಟಿಸಿ ಡಿಪೋ ಹಿಂಭಾಗದ ಹೊಸ ಬಡಾವಣೆಯಲ್ಲಿ ಸಾಲದಿಂದ ಮನನೊಂದು ಸೈನಿಕ ನೇಣು ಹಾಕಿಕೊಂಡು ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹುಣಸೂರು ತಾಲ್ಲೂಕಿನ ನಂಜಾಪುರದ ಮಂಜುನಾಥ ಶೆಟ್ಟಿಯ ಪುತ್ರ ಭೂ ಸೇನೆಯ ಬೆಂಗಳೂರಿನ ಆರ್.ಟಿ.ನಗರದ ಪ್ಯಾರಾಚೂಟ್ ರೆಜಮೆಂಟ್‌ನ ಸೈನಿಕ ಎಂ.ಚಂದ್ರಶೇಖರ್ (35) ಮೃತಪಟ್ಟವರು. ಇವರಿಗೆ ತಂದೆ, ತಾಯಿ, ಪತ್ನಿ, ಇಬ್ಬರು ಮಕ್ಕಳಿದ್ದಾರೆ.
ಚಂದ್ರಶೇಖರ್ ಕೆಎಸ್ಆರ್‌ಟಿಸಿ ಡಿಪೋ ಹಿಂಭಾಗದ ಹೊಸ ಬಡಾವಣೆಯಲ್ಲಿ ಎರಡು ವರ್ಷಗಳ ಹಿಂದೆ ಹೊಸದಾಗಿ ಮನೆ ನಿರ್ಮಿಸಿದ್ದರು. ಆ ವೇಳೆ ಬ್ಯಾಂಕ್ ಹಾಗೂ ಸ್ನೇಹಿತರ ಬಳಿ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ಈ ಸಂಬಂಧ ತಂದೆ ಮಂಜುನಾಥಶೆಟ್ಟಿ ದೂರು ನೀಡಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಎಸ್‌ಐ ಜಮೀರ್ ಅಹಮದ್ ತಿಳಿಸಿದ್ದಾರೆ.
ತಿಂಗಳ ಹಿಂದೆ ರಜೆ ಮೇಲೆ ಮನೆಗೆ ಬಂದಿದ್ದರು. ದೀಪಾವಳಿ ಹಬ್ಬದ ನಂತರ ಕರ್ತವ್ಯಕ್ಕೆ ವಾಪಸ್ ತೆರಳಬೇಕಿತ್ತು. ಭಾನುವಾರ ಶವ ಪರೀಕ್ಷೆ ನಂತರ ಸ್ವಗ್ರಾಮ ನಂಜಾಪುರದಲ್ಲಿ ಅಂತ್ಯಕ್ರಿಯೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.