ADVERTISEMENT

ಸೋಮವಾರಪೇಟೆ: ಶ್ರೀರಾಮ ಮಂದಿರದಲ್ಲಿ  ದಿವ್ಯ ಸತ್ಸಂಗ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 6:32 IST
Last Updated 2 ಜನವರಿ 2026, 6:32 IST
    ಸೋಮವಾರಪೇಟೆ ಕುರುಹಿನಶೆಟ್ಟಿ ಸಮಾಜದಿಂದ ಶ್ರೀರಾಮ ಮಂದಿರದಲ್ಲಿ ವೈಕುಂಠ ಏಕಾದಶಿ, ವಿಷ್ಣು ಸಹಸ್ರನಾಮ ಹಾಗೂ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ಸತ್ಸಂಗ ನಡೆಯಿತು 
    ಸೋಮವಾರಪೇಟೆ ಕುರುಹಿನಶೆಟ್ಟಿ ಸಮಾಜದಿಂದ ಶ್ರೀರಾಮ ಮಂದಿರದಲ್ಲಿ ವೈಕುಂಠ ಏಕಾದಶಿ, ವಿಷ್ಣು ಸಹಸ್ರನಾಮ ಹಾಗೂ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ಸತ್ಸಂಗ ನಡೆಯಿತು    

ಸೋಮವಾರಪೇಟೆ: ಕುರುಹಿನಶೆಟ್ಟಿ ಸಮಾಜದಿಂದ ಇಲ್ಲಿನ ಶ್ರೀರಾಮ ಮಂದಿರದಲ್ಲಿ ವೈಕುಂಠ ಏಕಾದಶಿ, ವಿಷ್ಣು ಸಹಸ್ರನಾಮ ಹಾಗೂ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ಸತ್ಸಂಗ ನಡೆಯಿತು.

 ದೇವರಿಗೆ ವಿಶೇಷ ಅಲಂಕಾರ, ಸ್ವರ್ಗದ ಬಾಗಿಲ ಪ್ರವೇಶ, ಶ್ರೀದೇವರ ದರ್ಶನ ನಡೆಯಿತು. ರಾಮಮಂದಿರದ ಅರ್ಚಕ ಮೋಹನ್ ಮೂರ್ತಿ ಶಾಸ್ತ್ರೀ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿತು.

 ಸೀತಾ ಬಳಗದಿಂದ ವಿಷ್ಣು ಸಹಸ್ರನಾಮ, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ  ಸತ್ಸಂಗ ನಡೆಯಿತು. ಸಮಾಜದ ಅಧ್ಯಕ್ಷ ಬಿ.ಎಂ. ರಾಮ್ ಪ್ರಸಾದ್, ಯುವಕ ಸಂಘದ ಅಧ್ಯಕ್ಷ ಬಿ.ಜಿ. ರವಿ, ಸೀತಾ ಬಳಗದ ಅಧ್ಯಕ್ಷೆ ಯಶೋಧ, ಆರ್ಟ್ ಆಫ್ ಲಿವಿಂಗ್ ಶಿಕ್ಷಕಿ ರಾಗಿಣಿ, ನೂರಾರು ಭಕ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.