
ಸಿದ್ದಾಪುರ: ಶಾಲಾ ಬಸ್‌ನಲ್ಲಿ ಸಂಚರಿಸುವ ವೇಳೆ ಕಾಡಾನೆ ದೃಶ್ಯ ಸೆರೆ ಹಿಡಿದ ಚಾಲಕನಿಗೆ ಅರಣ್ಯ ಇಲಾಖೆ ನೋಟಿಸ್ ಜಾರಿ ಮಾಡಿದೆ.
ಸಿದ್ದಾಪುರ ಬಾಡಗ ಬಾಣಂಗಾಲದಲ್ಲಿ ಬುಧವಾರ ಸಿದ್ದಾಪುರದ ಖಾಸಗಿ ಶಾಲೆಯ ಬಸ್ ಚಾಲಕ ವಿದ್ಯಾರ್ಥಿಗಳನ್ನು ಬಿಟ್ಟು ತೆರಳುವ ವೇಳೆ ಕಾಡಾನೆ ಸಂಚರಿಸುವ ಸಂದರ್ಭ ವಿಡಿಯೋ ಚಿತ್ರೀಕರಣದ ಸಲುವಾಗಿ ನಿರ್ಲಕ್ಷ್ಯದಿಂದ ನಿಧಾನವಾಗಿ ವಾಹನ ಚಲಾಯಿಸಿರುವ ಬಗ್ಗೆ ವಲಯ ಅರಣ್ಯ ಅಧಿಕಾರಿ ಗಂಗಾಧರ್, ಶಾಲಾ ಮುಖ್ಯೋಪಾಧ್ಯಾಯ ಹಾಗೂ ವಾಹನ ಚಾಲಕನಿಗೆ ನೋಟಿಸ್ ಜಾರಿ ಮಾಡಿದ್ದಾರೆ.
‘ಕರಡಿಗೋಡು, ಬಾಡಗ ಬಾಣಂಗಾಲ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಕಾಡಾನೆ ಓಡಾಟ ಹೆಚ್ಚಾಗಿದ್ದು, ಕಾಡಾನೆ ಉಪಟಳ ನಿಯಂತ್ರಿಸಲು ಇಲಾಖೆ ಕ್ರಮ ವಹಿಸುತ್ತಿದ್ದು, ಸಾರ್ವಜನಿಕರು ಇಲಾಖೆಗೆ ಸಹಕಾರ ನೀಡಬೇಕು. ವನ್ಯ ಪ್ರಾಣಿಗಳನ್ನು ಕೆಣಕುವ ರೀತಿಯಲ್ಲಿ ವಿಡಿಯೋ ಚಿತ್ರೀಕರಣ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು’ ಎಂದು ಗಂಗಾಧರ್ ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.