ಬಂಗಾರಪೇಟೆ: ತಾಲ್ಲೂಕಿನ ಕದಿರಿನತ್ತ ಗ್ರಾಮದಲ್ಲಿ ಸೋಮವಾರ ರಾತ್ರಿ ಕಾಡಾನೆ ಗದ್ದೆಯಲ್ಲಿ ಓಡಾಡಿ ಭತ್ತವನ್ನು ತಿಂದು, ತುಳಿದು ನಾಶ ಮಾಡಿದೆ. ಇದರಿಂದ ರೈತರಿಗೆ ಅಪಾರ ನಷ್ಟವುಂಟಾಗಿದೆ.
ಗ್ರಾಮದ ಸಂತೋಷ ರಾವ್ ಮತ್ತು ಈಶ್ವರ ರಾವ್ ಅವರ ಗದ್ದೆ ತುಳಿದು ಸುಮಾರು ₹50 ಸಾವಿರ ಮೌಲ್ಯದ ಬೆಳೆ ನಾಶವಾಗಿದೆ. ಹಾಗಾಗಿ ಉಳಿದ ರೈತರು ಕಷ್ಟಪಟ್ಟು ಬೆಳೆದ ರಾಗಿ, ತೆಂಗು, ಬಾಳೆ, ಭತ್ತ, ರಾಗಿ ಸೇರಿದಂತೆ ವಿವಿಧ ಬೆಳೆಗಳನ್ನು ನಾಶಪಡಿಸುತ್ತವೆ ಎಂಬ ಭಯದಲ್ಲಿದ್ದಾರೆ.
ಆನೆ ದಾಳಿ ನಿರಂತರವಾಗಿದೆ. ಬೆಳೆದ ಬೆಳೆ ಕೈಸೇರದೆ ರೈತರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ ಎಂಬುದು ರೈತರ ಅಳಲಾಗಿದೆ.
ಆನೆ ಹಾವಳಿ ತೀವ್ರವಾಗಿದ್ದು, ತ್ವರಿತವಾಗಿ ಸ್ಪಂದಿಸಲು ಮತ್ತು ಆನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸಲು ವಿಶೇಷ ಆನೆ ಕಾರ್ಯಪಡೆ ರಚಿಸಲಿ.ಮಲ್ಲಿಕಾರ್ಜುನ ರೆಡ್ಡಿ, ಸಮಾಜ ಸೇವಕ
ಆನೆ ದಾಳಿಯಿಂದ ಬೆಳೆ ನಾಶವಾದಾಗ ಬೆಳೆ ಸಾಲ ಮತ್ತು ಜೀವನ ನಡೆಸಲು ಕಷ್ಟವಾಗುತ್ತದೆ. ಹಾಗಾಗಿ ಸರ್ಕಾರ ಆನೆ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಕ್ರಮ ಕೈಗೊಳ್ಳಲಿಅಪ್ಪೋಜಿರಾವ್, ತಾಲ್ಲೂಕು ರೈತ ಸಂಘದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.