ADVERTISEMENT

ಸಂಘಪರಿವಾರದವರಿಗೆ ತಿಳುವಳಿಕೆ ನೀಡಿ: ಸಾಹಿತಿ ಲಕ್ಷ್ಮಿಪತಿ ಕೋಲಾರ ಸಲಹೆ

ಸಮುದಾಯ ಕರ್ನಾಟಕ ಸಂಘಟನೆಯ ಸಮ್ಮೇಳನದ ಸಮಾರೋಪ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2019, 13:50 IST
Last Updated 15 ಡಿಸೆಂಬರ್ 2019, 13:50 IST
ಕೋಲಾರದಲ್ಲಿ ಭಾನುವಾರ ಸಮುದಾಯ ಕರ್ನಾಟಕ ಸಂಘಟನೆಯ ರಾಜ್ಯ ಸಮ್ಮೇಳನದಲ್ಲಿ ಸಾಹಿತಿ ಲಕ್ಷ್ಮಿಪತಿ ಕೋಲಾರ ಮಾತನಾಡಿದರು.
ಕೋಲಾರದಲ್ಲಿ ಭಾನುವಾರ ಸಮುದಾಯ ಕರ್ನಾಟಕ ಸಂಘಟನೆಯ ರಾಜ್ಯ ಸಮ್ಮೇಳನದಲ್ಲಿ ಸಾಹಿತಿ ಲಕ್ಷ್ಮಿಪತಿ ಕೋಲಾರ ಮಾತನಾಡಿದರು.   

ಕೋಲಾರ: ‘ಸಂಘಪರಿವಾರದಲ್ಲಿರುವ ಮಿತ್ರರು ದಾರಿ ತಪ್ಪುತ್ತಿರುವ ಗೂಡಿನಲ್ಲಿದ್ದು, ಅವರಿಗೆ ತಿಳುವಳಿಕೆ ನೀಡಿ ಸಮಾಜ ಮುಖಿಗೆ ಕರೆತರುವ ಪ್ರಯತ್ನ ಅಗಬೇಕು’ ಎಂದು ಸಾಹಿತಿ ಲಕ್ಷ್ಮಿಪತಿ ಕೋಲಾರ ಸಲಹೆ ನೀಡಿದರು.

ಇಲ್ಲಿನ ಭಾನುವಾರ ಸಮುದಾಯ ಕರ್ನಾಟಕ ಸಂಘಟನೆಯ 7ನೇ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ‘ವಿಚಾರ ಗೊತ್ತಿಲ್ಲದವರ ಕಡೆಯಿಂದ ದೇಶದಲ್ಲಿ ಪ್ರಗತಿಪರರ ಕೊಲೆಗಳು ನಡೆಯುತ್ತಿವೆ. ಅವರ ಎದೆಯಲ್ಲಿ ಬೇಡವಾದ ವಿಚಾರಗಳನ್ನು ತುಂಬಿಸಿ ಶಾಂತಿಯನ್ನು ನಾಶ ಮಾಡಲು ಹೊರಟಿದ್ದಾರೆ’ ಎಂದು ವಿಷಾದಿಸಿದರು.

‘ಯಾವುದೇ ವಿಚಾರನ್ನು ಒಳಿತಿಣಿಂದ ಮಾಡುತ್ತಿದ್ದರಾ ಅಥವಾ ಕೆಡಕಿನಿಂದ ಮಾಡುತ್ತಿದ್ದಾರೆ ಎಂಬುದನ್ನು ಅಲೋಚನೆ ಮಾಡದೆ ಸಾಹಿತಿಗಳ ಕೊಲೆಗಳು ನಮ್ಮಂತ ನಾಡಿನಲ್ಲಿ ನಡೆಯುತ್ತಿರುವುದು ದುರಂತವಾಗಿದೆ. ತನ್ನ ತಲೆಯಲ್ಲಿ ತುಂಬಿರುವ ಕಲ್ಮಶವನ್ನು ತೆಗೆದು ಹಾಕಿ ಹೊಸ ವಿಚಾರಗಳನ್ನು ತರವು ನಿಟ್ಟಿನಲ್ಲಿ ಸಮುದಾಯ ಸಂಘಟನೆ ಅಲೋಚಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಜನಪದ ಅಕಾಡಮಿ ಮಾಜಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್, ‘1970ರಲ್ಲಿ ಹೊಸ ಮೌಲ್ಯಗಳ ಆಧಾರದ ಮೇರೆಗೆ ಸ್ಥಾಪನೆಯಾದ ಸಮುದಾಯ ಸಂಘಟನೆಯು, ಪ್ರಸ್ತುತ ಹೊಸ ರೂಪದಲ್ಲಿ ಹೊಸ ವಿಚಾರಗಳ ಬಗ್ಗೆ ಜನ ಸಾಮಾನ್ಯರಿಗೆ ಅರಿವು ಮೂಡಿಸಬೇಕು’ ಎಂದರು.

ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷೆ ವಿ.ಗೀತಾ ಮಾತನಾಡಿ, ‘ದೇಶದಲ್ಲಿ ಎಲ್ಲ ಸಮುದಾಯಗಳನ್ನು ಅಳುವ ಸರ್ಕಾರಗಳ ನೀತಿಗಳಿಂದ ಧಮನ ಮಾಡಲು ಹೊರಟ್ಟಿದ್ದು, ಕಲೆ ಮತ್ತು ಸಾಹಿತ್ಯ ಮೂಲಕ ಸಮುದಾಯ ಸಂಘಟನೆ ಎಚ್ಚರಿಸುವ ಕೆಲಸ ಮಾಡಬೇಕಾಗಿದೆ’ ಎಂದು ಸಲಹೆ ನೀಡಿದರು.

‘ಸಂವಿಧಾನಕ್ಕೆ ಅಪಾಯ ಇರುವ ದೇಶದಲ್ಲಿ ಸಂವಿಧಾನ ಉಲ್ಲಂಘನೆ ಮಾಡಲು ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಇಂತಹ ಸಂದರ್ಭದಲ್ಲಿ ಸಂವಿಧಾನ ಓದು ಅಭಿಯಾನ, ಜಾಥಾಗಳ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಮೂಲಕ ಸಂವಿಧಾನ ಉಳಿಸಿಕೊಳ್ಳಬೇಕು’ ಎಂದು ಹೇಳಿದರು.

ಚಿಂತನೆ ಮತ್ತು ಹೋರಾಟಗಳು ಒಟ್ಟಿಗೆ ಸೇರಿ ದೇಶದ ಬೆಳವಣಿಗೆಗೆ ಕೊಡುಗೆಯಾಗಬೇಕು. ಬಹುತ್ವ ಹೊಡೆಯುವ ಶಕ್ತಿಗಳನ್ನು ಮೆಟ್ಟಿ ನಿಲ್ಲುವ ಬರವಣಿಗೆಗಳ ಮೂಲಕ ಯುವಕರು ಹೊಸ ವಿಚಾರಗಳನ್ನು ಅಲೋಚನೆ ಶಕ್ತಿ ಸಮುದಾಯ ತುಂಬಬೇಕು’ ಎಂದು ತಿಳಿಸಿದರು.

ಪದಾಧಿಕಾರಿಗಳ ಆಯ್ಕೆ: ಸಮುದಾಯ ರಾಜ್ಯ ಘಟಕದ ಗೌರವಾಧ್ಯಕ್ಷರಾಗಿ ಬೊಳುವಾರು ಮಹಮ್ಮದ್ ಕುಂಞ, ಅಧ್ಯಕ್ಷರಾಗಿ ಅಚ್ಚುತ, ಉಪಾಧ್ಯಕ್ಷರಾಗಿ ವಾಸುದೇವ ಉಚ್ಚಿಲ್, ಟಿ.ಸುರೇಂದ್ರರಾವ್, ಬಿ.ಈಳಿಗೇರ, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ದೇವೇಂದ್ರಗೌಡ, ಜಂಟಿ ಕಾರ್ಯದರ್ಶಿಯಾಗಿ ಕೆ.ಎಸ್.ವಿಮಲಾ, ಉದಯ್ ಗಾಂವ್ಕರ್, ಶಶಿಧರ್, ಖಜಾಂಚಿಯಾಗಿ ಎನ್.ಕೆ.ವಸಂತರಾಜ್, ಸಂಘಟನಾ ಕಾರ್ಯದರ್ಶಿಯಾಗಿ ವಿಠ್ಠಲ ಭಂಡಾರಿ ಆಯ್ಕೆಯಾದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅ.ಮು.ಲಕ್ಷ್ಮಿನಾರಾಯಣ್, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಜೆ.ಜಿ.ನಾಗರಾಜ್, ಸಮುದಾಯ ರಾಜ್ಯ ಘಟಕದ ಅಧ್ಯಕ್ಷ ಅಚ್ಚುತ, ಗೌರವಾಧ್ಯಕ್ಷ ಬೊಳುವಾರು ಮಹಮ್ಮದ್ ಕುಂಞ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.