ವೇಮಗಲ್: ವೇಮಗಲ್ ಕೈಗಾರಿಕಾ ಪ್ರದೇಶದ ಲಿಕೊ ಕಂಪನಿ ಪ್ರೈ. ನೇತೃತ್ವದಲ್ಲಿ ಎಂ.ವಿ.ಜೆ ವೈದ್ಯಕೀಯ ಕಾಲೇಜು ಮತ್ತು ಹೊಸಕೋಟೆಯ ಸಂಶೋಧನಾ ಆಸ್ಪತ್ರೆ ಹಾಗೂ ಜೇನುಗೂಡು ರೂರಲ್ ಡೆವಲಪ್‌ಮೆಂಟ್ ಅಂಡ್ ಕಲ್ಚರಲ್ ಟ್ರಸ್ಟ್ ವತಿಯಿಂದ ಕುರುಗಲ್ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಬುಧವಾರ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾತನಾಡಿದ ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ‘ಗ್ರಾಮೀಣ ಭಾಗದ ಜನರ ಆರೋಗ್ಯ ದೃಷ್ಟಿಯಿಂದ ಇಂತಹ ಆರೋಗ್ಯ ಶಿಬಿರಗಳ ಅಗತ್ಯವಿದೆ. ಸಾರ್ವಜನಿಕರು ಇಂಥ ಯೋಜನೆಗಳ ಸದುಪಯೋಗಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಎಂವಿಜೆ ಆಸ್ಪತ್ರೆಯ ವೈದ್ಯಾಧಿಕಾರಿ ಪ್ರಮೋದ್ ಮಾತನಾಡಿ, ಉತ್ತಮ ಆರೋಗ್ಯದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು.
ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ವೆಂಕಟೇಶ್, ಲಿಕೊ ಕಂಪನಿ ಮಾನವ ಸಂಪನ್ಮೂಲಗಳ ವಿಭಾಗದ ವ್ಯವಸ್ಥಾಪಕ ಮಹದೇವ್ ಮಾತನಾಡಿದರು.
ಶಿಬಿರದಲ್ಲಿ ಲಿಕೊ ಕಂಪನಿ ವ್ಯವಸ್ಥಾಪಕಿ ಶಾಲಿನಿ ಮಾಯಂಕ್, ಜೇನುಗೂಡು ಟ್ರಸ್ಟ್ ಉಪಾಧ್ಯಕ್ಷ ಕೆ.ಎಂ ಚೌಡೇಗೌಡ, ಕುರುಗಲ್ ಗಿರೀಶ್, ಎಂಜಲಿನ್ ಅರ್ಪಿತಾ ಎಸ್, ಬೆಟ್ಟಹಳ್ಳಿ ಗೋಪಿನಾಥ್, ತರಬಹಳ್ಳಿ ಹರೀಶ್, ದೇವಿದಾಸ್ ಸುಬ್ರಾಯ್ ಶೇಠ್, ಸೂಲಿಬೆಲೆ ಮಂಜುನಾಥ್, ಬಾಬು, ಮುರಳಿ, ಸುನಂದಮ್ಮ, ನಾರಾಯಣಸ್ವಾಮಿ, ಭಾಗ್ಯಶ್ರಿ, ಗಂಗಧಾರ ಮೂರ್ತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.