ADVERTISEMENT

ಗೌನಿಪಲ್ಲಿ ಗ್ರಾ.ಪಂ. ಅಧ್ಯಕ್ಷರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 3:08 IST
Last Updated 8 ಏಪ್ರಿಲ್ 2022, 3:08 IST
ಶ್ರೀನಿವಾಸಪುರ ತಾಲ್ಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಎಸ್. ಶೇಷಾದ್ರಿ ಚುನಾಯಿತರಾಗಿದ್ದಾರೆ
ಶ್ರೀನಿವಾಸಪುರ ತಾಲ್ಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಎಸ್. ಶೇಷಾದ್ರಿ ಚುನಾಯಿತರಾಗಿದ್ದಾರೆ   

ಶ್ರೀನಿವಾಸಪುರ: ತಾಲ್ಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಆಯ್ಕೆಗೆ ಗುರುವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಸ್. ಶೇಷಾದ್ರಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷೆಯಾಗಿದ್ದ ಅರುಣಾ ರವಿಕುಮಾರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು. ಒಟ್ಟು 23 ಸದಸ್ಯರಿದ್ದು, ಶೇಷಾದ್ರಿ 14 ಮತ ಪಡೆದು ಗೆಲುವು ಸಾಧಿಸಿದರು. ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ 9 ಮತ ಪಡೆದು ಸೋಲುಂಡರು.

ಚುನಾವಣಾಧಿಕಾರಿ ಎನ್. ನಾರಾಯಣಸ್ವಾಮಿ, ಪಿಡಿಒ ಗೌಸ್ ಸಾಬ್ ಇದ್ದರು.

ADVERTISEMENT

ಚುನಾವಣೆ ಬಳಿಕ ಮಾಜಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ನೂತನ ಅಧ್ಯಕ್ಷ ಶೇಷಾದ್ರಿ ಅವರಿಗೆ ಶುಭ ಹಾರೈಸಿದರು. ಮುಖಂಡರಾದ ಬಕ್ಷುಸಾಬ್, ರವಿಕುಮಾರ್, ಬಿ.ವಿ. ಶಿವಾರೆಡ್ಡಿ, ಕೆ. ರಾಜೇಂದ್ರಪ್ರಸಾದ್, ವಿ. ಶ್ರೀನಿವಾಸ್, ಎಂ. ರಾಮ್‌ಮೋಹನ್, ಗಂಗಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.