ADVERTISEMENT

ಬಂಗಾರಪೇಟೆ: ಗರಿಗೆದರಿದ ಕೃಷಿ ಚಟುವಟಿಕೆ

ಬಂಗಾರಪೇಟೆ ತಾಲ್ಲೂಕಿನಲ್ಲಿ ಮುಂಗಾರು ಪ್ರಾರಂಭ

ಮಂಜುನಾಥ್ ಎಸ್.
Published 12 ಜೂನ್ 2025, 6:57 IST
Last Updated 12 ಜೂನ್ 2025, 6:57 IST
ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಹೋಬಳಿಯ ಸಾಕರಸನಹಳ್ಳಿ ಗ್ರಾಮದ ರೈತರೊಬ್ಬರು ರಾಗಿ ಬಿತ್ತನೆ ಮಾಡುತ್ತಿರುವುದು 
ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಹೋಬಳಿಯ ಸಾಕರಸನಹಳ್ಳಿ ಗ್ರಾಮದ ರೈತರೊಬ್ಬರು ರಾಗಿ ಬಿತ್ತನೆ ಮಾಡುತ್ತಿರುವುದು    

ಬಂಗಾರಪೇಟೆ: ತಾಲ್ಲೂಕಿನಾದ್ಯಂತ ಮೇ ತಿಂಗಳಿನಲ್ಲಿ ಉತ್ತಮ ಮಳೆಯಾಗಿದೆ. ಆದರೆ, ಬಿತ್ತನೆ ಮಾಡಲು ಅಗತ್ಯವಿರುವಷ್ಟು ಮಳೆ ಸುರಿದಿಲ್ಲ. ಆದಾಗ್ಯೂ, ಪ್ರತಿ ವರ್ಷದಂತೆ ಈ ಬಾರಿಯು ಮುಂಗಾರು ಬಿತ್ತನೆಗೆ ಕೃಷಿ ಇಲಾಖೆಯು ಪೂರ್ವ ಸಿದ್ಧತೆ ಮಾಡಿಕೊಂಡಿದೆ.

ಈ ವರ್ಷ ಮುಂಗಾರು ಅವಧಿಯಲ್ಲಿ ಕೃಷಿ ಇಲಾಖೆಯು ಒಟ್ಟು 14,349 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಿದೆ. ಕಳೆದ ವರ್ಷ ಹಾಕಿಕೊಂಡ ಗುರಿಗಿಂತಲೂ ಈ ವರ್ಷದ ಗುರಿ ಹೆಚ್ಚಿದೆ. 

2025–26ನೇ ಸಾಲಿನಲ್ಲಿ 12,314 ಹೆಕ್ಟೇರ್‌ನಲ್ಲಿ ಏಕದಳ ಧಾನ್ಯಗಳು, 1,627 ಹೆಕ್ಟೇರ್‌ನಲ್ಲಿ ದ್ವಿದಳ ಧಾನ್ಯಗಳು, 403 ಹೆಕ್ಟೇರ್‌ನಲ್ಲಿ ಎಣ್ಣೆಕಾಳುಗಳು, 5 ಹೆಕ್ಟೇರ್‌ನಲ್ಲಿ ವಾಣಿಜ್ಯ ಬೆಳೆಗಳ ಬಿತ್ತನೆ ಗುರಿ ಇದೆ.  

ADVERTISEMENT

ರಾಗಿ, ಅವರೆ, ತೊಗರಿ ,ನೆಲಗಡಲೆ ಅಧಿಕ: ರಾಗಿ, ಭತ್ತ, ಅವರೆ, ತೊಗರಿ ಮುಂಗಾರು ಅವಧಿಯ ಪ್ರಮುಖ ಬಿತ್ತನೆಯ ಬೆಳೆಗಳಾಗಿವೆ. ಈ ಬಾರಿ 11,591 ಹೆಕ್ಟೇರ್‌ನಲ್ಲಿ ರಾಗಿ, 82 ಹೆಕ್ಟೇರ್‌ನಲ್ಲಿ ಹೈಬ್ರಿಡ್ ಮುಸುಕಿನ ಜೋಳ, 269 ಹೆಕ್ಟೇರ್‌ನಲ್ಲಿ ನೆಲಗಡಲೆ, 951 ಹೆಕ್ಟೇರ್‌ನಲ್ಲಿ ಅವರೆ, 41 ಹೆಕ್ಟೇರ್‌ನಲ್ಲಿ ಅಲಸಂದೆ ,423 ಹೆಕ್ಟೇರ್‌ನಲ್ಲಿ ತೊಗರಿ ಬಿತ್ತನೆಯ ಗುರಿ ಇದೆ. 598 ಹೆಕ್ಟೇರ್‌ನಲ್ಲಿ ಭತ್ತ, 20 ಹೆಕ್ಟೇರ್‌ನಲ್ಲಿ ಜೋಳ, 43 ಹೆಕ್ಟೇರ್ ತೃಣ ಧಾನ್ಯಗಳು, ಅಲಸಂದೆ 41, ಸಾಸಿವೆ 39, ಎಳ್ಳು 20, ಹುಚ್ಚೆಳ್ಳು 20, ಸಾಸುವೆ 39,ಹರಳು 55, ಹುರುಳಿ 212,ಕಬ್ಬು 15 ಹೆಕ್ಟೇರ್‌ನಲ್ಲಿ ಬಿತ್ತನೆಯ ಗುರಿ ಇದೆ ಎಂದು ತಾಂತ್ರಿಕ ಅಧಿಕಾರಿ ಜ್ಯೋತಿ ಸಿ ಮಾಹಿತಿ ನೀಡಿದರು.

ಬಿತ್ತನೆ ಬೀಜಗಳನ್ನು ಸಹಾಯ ಧನದ ಬೆಲೆ ಮಾರಾಟ ಮಾಡಲಾಗುತ್ತಿದ್ದು ಬೇಡಿಕೆಗೆ ಅನುಗುಣವಾಗಿ ಬಿತ್ತನೆಗೆ ರಸಗೊಬ್ಬರ ಬಿತ್ತನೆ ಬೀಜಗಳನ್ನು ಸಿದ್ಧಗೊಳಿಸಿಕೊಳ್ಳಲಾಗಿದೆ. ಯಾವುದೇ ಕೊರತೆಗಳು ಎದುರಾಗುವುದಿಲ್ಲ. ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪ್ರತಿಭಾ ಸಹಾಯಕ ನಿರ್ದೇಶಕಿ ಕೃಷಿ ಇಲಾಖೆ ಬಂಗಾರಪೇಟೆ
ಮುಂಗಾರು ಹಂಗಾಮಿನ ಬಿತ್ತನೆಗೆ ಕೃಷಿ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು ರೈತರಿಗೆ ಬೀಜ ಹಾಗೂ ಲಘು ಪೋಷಕಾಂಶಗಳ ವಿತರಣೆಗೆ ತಯಾರಿ ಮಾಡಿಕೊಂಡಿದೆ
ವಿಜಯ್ ಕುಮಾರ್ ಬೂದಿಕೋಟೆ ಸಹಾಯಕ ಕೃಷಿ ಅಧಿಕಾರಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.