ADVERTISEMENT

ಚಿಕ್ಕತಿರುಪತಿ ದೇಗುಲ ಅಭಿವೃದ್ಧಿಗೆ ಅಡ್ಡಿಪಡಿಸಿದ ವ್ಯಕ್ತಿ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 4:25 IST
Last Updated 17 ಜನವರಿ 2026, 4:25 IST
ಮಾಲೂರು ತಾಲ್ಲೂಕಿನ ಚಿಕ್ಕತಿರುಪತಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಭಾಗವಹಿಸಿದ್ದ ಗ್ರಾಮಸ್ಥರು
ಮಾಲೂರು ತಾಲ್ಲೂಕಿನ ಚಿಕ್ಕತಿರುಪತಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಭಾಗವಹಿಸಿದ್ದ ಗ್ರಾಮಸ್ಥರು   

ಮಾಲೂರು: ಚಿಕ್ಕತಿರುಪತಿ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯ ಅಭಿವೃದ್ಧಿ ವಿಚಾರದಲ್ಲಿ ಚಿಕ್ಕತಿರುಪತಿ ಗ್ರಾಮಸ್ಥರೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ತಾ.ಪಂ.ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಿ.ನಾಗೇಶ್ ತಿಳಿಸಿದರು.

ಮಾಲೂರಿನ ಚಿಕ್ಕತಿರುಪತಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಾಲಯ ಅಭಿವೃದ್ಧಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಶಾಸಕ ಕೆ.ವೈ.ನಂಜೇಗೌಡರು ಪಣತೊಟ್ಟಿದ್ದಾರೆ. ಆದರೆ, ದೇವಾಸ್ಥಾನ ಅಭಿವೃದ್ಧಿ ಕಾರ್ಯಗಳಿಗೆ ಕಲಿಕೆರೆ ಗ್ರಾಮದ ವೆಂಕಟೇಶ್ ಗೌಡ ಪದೇ ಪದೇ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ಮಂಗಳವಾರ ದೇವಾಸ್ಥಾನದ ನೂತನ ಗೋಪುರ ಮುಂಭಾಗ ಪಂಚಾಯಿತಿ ವತಿಯಿಂದ ಗ್ರಾ.ಪಂ.ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಜಿ.ವಿ.ಮಂಜುನಾಥ್ ನೇತೃತ್ವದಲ್ಲಿ ಟೈಲ್ಸ್ ಅಳವಡಿಸುವ ಕಾರ್ಯ ನಡೆಯುವಾಗ ಸ್ಥಳಕ್ಕೆ ಆಗಮಿಸಿದ ವೆಂಕಟೇಶ್ ಗೌಡ ಮಂಜುನಾಥ ಅವರೊಂದಿಗೆ ಜಗಳವಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಚಾಕುವಿನಿಂದ ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿ ದರ್ಪ ತೋರಿದ್ದಾರೆ. ಅವರ ನಡುವಳಿಕೆಗೆ ಗ್ರಾಮಸ್ಥರ ವಿರೋಧವಿದೆ ಎಂದರು.

ADVERTISEMENT

ಚಿಕ್ಕತಿರುಪತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಮಾರ್ ಮಾತನಾಡಿ, ಪಂಚಾಯಿತಿ ವತಿಯಿಂದ ಸುಮಾರು ₹20 ಲಕ್ಷ ವೆಚ್ಚದಲ್ಲಿ ಟೈಲ್ಸ್ ಅಳವಡಿಸುವ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಕಾಮಗಾರಿಗೆ ಅಡ್ಡಿಪಡಿಸಿ, ದೌರ್ಜನ್ಯ ಎಸಗುವುದು ತಪ್ಪು. ಏನಾದರೂ ಇದ್ದರೆ ಕಾನೂನಿನ ಚೌಕಟ್ಟಿನಲ್ಲಿ ಪರಿಹರಿಸಿಕೊಳ್ಳೋಣ ಎಂದರು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆಲಂಬಾಡಿ ಎಂ.ಗೋಪಾಲ್, ರಾಮ್ ಪ್ರಸಾದ್, ರಾಘವೇಂದ್ರ ಪ್ರಸಾದ್, ಶ್ರೀನಿವಾಸನ್, ಶ್ರೀನಿವಾಸಯ್ಯ, ಕೋಟಿ ಶ್ರೀನಿವಾಸ್, ರಾಜಶೇಖರ್, ಕೃಷ್ಣಮೂರ್ತಿ, ಜಯಮಂಗಲ ಶ್ರೀನಿವಾಸ್, ಡಿ.ಎಲ್.ತಿಮ್ಮರಾಯಪ್ಪ, ಕೃಷ್ಣಾರೆಡ್ಡಿ, ಧರಣಿ ಬಾಬು, ಸತೀಶ್, ನ್ಯಾತಪ್ಪ, ಶ್ರೀನಿವಾಸ್ ರೆಡ್ಡಿ, ಸೀನಪ್ಪ, ತ್ಯಾಗಪ್ಪ, ಶ್ರೀನಿಧಿ ಶ್ರೀನಿವಾಸ್, ಆರ್.ವೆಂಕಟೇಶ್, ನಂದನ್, ವಿಠ್ಠಲ್, ಪಾಂಡು ಸುಂದರೇಶ್, ಶ್ರೀನಿವಾಸ್ ಶೆಟ್ಟಿ, ಗುರುಮೂರ್ತಿ ರೆಡ್ಡಿ, ರಂಜಿತ್, ಉಪೇಂದ್ರ, ಕಲಿಕೆರೆ ಗುಲ್ಲು, ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.