ADVERTISEMENT

ಎಸ್ಸೆಸ್ಸೆಲ್ಸಿ ಮರು ಮೌಲ್ಯಮಾಪನ: ನಿಶಾಂತ್ ಶ್ರೀವಾತ್ಸವ್ ಜಿಲ್ಲೆಗೆ ಅಗ್ರ

​ಪ್ರಜಾವಾಣಿ ವಾರ್ತೆ
Published 7 ಜೂನ್ 2023, 6:43 IST
Last Updated 7 ಜೂನ್ 2023, 6:43 IST
ನಿಶಾಂತ್ ಶ್ರೀವಾತ್ಸವ್‌
ನಿಶಾಂತ್ ಶ್ರೀವಾತ್ಸವ್‌   

ಕೋಲಾರ: ಎಸ್ಸೆಸ್ಸೆಲ್ಸಿ ಮರು ಮೌಲ್ಯಮಾಪನದಲ್ಲಿ 624 ಅಂಕ ಗಿಟ್ಟಿಸಿಕೊಂಡಿರುವ ಮುಳಬಾಗಿಲು ನಗರದ ಅಮರಜ್ಯೋತಿ ಶಾಲೆಯ ವಿದ್ಯಾರ್ಥಿ ಕೆ.ನಿಶಾಂತ್ ಶ್ರೀವಾತ್ಸವ್ ಜಿಲ್ಲೆಗೆ ಅಗ್ರ ಹಾಗೂ ರಾಜ್ಯಕ್ಕೆ ದ್ವಿತೀಯ ಸ್ಥಾನದ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕ ವಿ.ಕೃಷ್ಣಪ್ಪ ಹಾಗೂ ಡಿ.ಲಕ್ಷ್ಮಿ ದಂಪತಿ ಪುತ್ರರಾಗಿರುವ ನಿಶಾಂತ್ ಶ್ರೀವಾತ್ಸವ್‍ ಸಮಾಜ ವಿಜ್ಞಾನದಲ್ಲಿ ಮಾತ್ರ 99 ಅಂಕ ಪಡೆದಿದ್ದು, ಉಳಿದ ಐದು ವಿಷಯಗಳಲ್ಲಿ ಶೇ 100 ಸಾಧನೆ ಮಾಡಿದ್ದಾರೆ.

ಮೌಲ್ಯಮಾಪನದಲ್ಲಿ ಅನ್ಯಾಯವಾಗಿದೆ ಎಂದು ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದರು. ಗಣಿತದಲ್ಲಿ 6 ಅಂಕ, ವಿಜ್ಞಾನದಲ್ಲಿ 2 ಅಂಕ, ಸಮಾಜ ವಿಜ್ಞಾನದಲ್ಲಿ 3ಅಂಕ ಸೇರಿ ಒಟ್ಟು 11 ಅಂಕ ಹೆಚ್ಚುವರಿಯಾಗಿ ಬಂದಿವೆ. ಈ ಮೊದಲು 625ಕ್ಕೆ 613 ಅಂಕ ಗಳಿಸಿದ್ದರು. ಈ ವಿದ್ಯಾರ್ಥಿಗೆ ಡಿಡಿಪಿಐ ಕೃಷ್ಣಮೂರ್ತಿ ಅಭಿನಂದನೆ ಸಲ್ಲಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.