ADVERTISEMENT

ಗಂಗಾವತಿ: 371 (ಜೆ) ಸಮಾರ್ಪಕ ಅನುಷ್ಠಾನಕ್ಕೆ ಒತ್ತಾಯಿಸಿ ಆ.1ರಂದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 14:14 IST
Last Updated 30 ಜುಲೈ 2024, 14:14 IST

ಗಂಗಾವತಿ: ‘371(ಜೆ) ಕಲಂ ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿಲ್ಲ. ರಾಜ್ಯದ ಕೆಲ ಭಾಗಗಳಿಂದ ಕಲಂ ರದ್ದತಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಇದನ್ನು ವಿರೋಧಿಸಿ ಆಗಸ್ಟ್ 1ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು 371 (ಜೆ) ಸಮರ್ಪಕ ಅನುಷ್ಠಾನ ಸಮಿತಿ ಸಂಚಾಲಕ ಇ. ಧನರಾಜ್ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಹಲವು ವರ್ಷಗಳಿಂದ ನಮ್ಮ ಭಾಗದ ಜನರಿಗೆ 371(ಜೆ) ಕಲಂನ ಸೌಲಭ್ಯ ಸಿಗುತ್ತಿಲ್ಲ. ನಗರದ ಸಿಬಿಎಸ್ ವೃತ್ತ ಸೇರಿ ವಿವಿಧ ವೃತ್ತಗಳಿಂದ ಸಾಹಿತಿಗಳು, ಚಿಂತಕರು, ಕನ್ನಡ ಪರ ಮತ್ತು ವಿದ್ಯಾರ್ಥಿ ಸಂಘಟನೆಗಳು, ವಿವಿಧ ಸಂಘ ಸಂಸ್ಥೆಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ಮೂಲಕ ಗಾಂಧಿವೃತ್ತಕ್ಕೆ ಆಗಮಿಸಲಿದ್ದಾರೆ. ನಂತರ ಬಹಿರಂಗ ಸಭೆ ಜರುಗಲಿದೆ’ ಎಂದು ಹೇಳಿದರು.

ಚನ್ನಬಸವಸ್ವಾಮಿ, ಸಾಹಿತಿ ಅಜ್ಮೀರ್ ನಂದಾಪುರ, ಎ.ಕೆ. ಮಹೇಶ ವಿರುಪಾಕ್ಷಗೌಡ ಹೇರೂರು, ಪಂಪಣ್ಣ ನಾಯಕ ರಾಜೇಶರೆಡ್ಡಿ, ಪವನಕುಮಾರ ಗುಂಡೂರು, ಕೆ.ಅಂಬಣ್ಣ, ರಾಘವೇಂದ್ರ ತೋನಾ, ಕೃಷ್ಣ, ತಿಪ್ಪೆಸ್ವಾಮಿ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.