ತಾವರಗೇರಾ: ಸ್ಥಳೀಯ ಗಂಗಾವತಿ ರಸ್ತೆಯಲ್ಲಿರುವ ಸುಂಕಲಮ್ಮದೇವಿ ದೇವಸ್ಥಾನದಲ್ಲಿ ಆಷಾಢ ಮಾಸದ ಪ್ರಯುಕ್ತ ಈಚೆಗೆ ಭಾವಸಾರ ಕ್ಷತ್ರಿಯ ಸಮಾಜದಿಂದ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಿದವು.
ಬೆಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ನಂತರ ಸಮಾಜದ ಮಹಿಳೆಯರಿಂದ ಮಂಗಳಾರತಿ, ದೇವಿಗೆ ನೈವೇದ್ಯ ಸಲ್ಲಿಸಲಾಯಿತು.
ದೇವಸ್ಥಾನ ಆವರಣದಲ್ಲಿ ಪ್ರತಿ ಕುಟುಂಬದವರು ತಾವೇ ತಮ್ಮ ಮನೆಗಳಿಂದ ತಂದು ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದರು. ಸಮಾಜದ ಅಧ್ಯಕ್ಷ ಲಕ್ಷ್ಮಣ ಮಿರಜ್ಕರ್, ಉಪಾಧ್ಯಕ್ಷ ಪರಶುರಾಮ ಪತಂಗಿ, ಹಿರಿಯರಾದ ರವಿಕುಮಾರ ಲೋಕರೆ, ದಶರಥ, ಶ್ಯಾಮಣ್ಣ ಮತ್ತು ಪ್ರಮುಖರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.