ADVERTISEMENT

ಅಳವಂಡಿ | ಗವಿಮಠಕ್ಕೆ 25 ಸಾವಿರ ರವೆ ಉಂಡಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 7:27 IST
Last Updated 12 ಜನವರಿ 2026, 7:27 IST
ಅಳವಂಡಿ ಸಮೀಪದ ಬೆಟಗೇರಿ ಗ್ರಾಮಸ್ಥರು ರವೆ ಉಂಡೆಯನ್ನು ತಯಾರಿಸಿದರು
ಅಳವಂಡಿ ಸಮೀಪದ ಬೆಟಗೇರಿ ಗ್ರಾಮಸ್ಥರು ರವೆ ಉಂಡೆಯನ್ನು ತಯಾರಿಸಿದರು   

ಅಳವಂಡಿ: ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರೆಗೆ ಆಗಮಿಸುವ ಭಕ್ತರ ಸಮೀಪದ ಬೆಟಗೇರಿ ಗ್ರಾಮದ ಮಳೆ ಮಲ್ಲೇಶ್ವರ ಭಜನಾ ಸಂಘ ಹಾಗೂ ಗ್ರಾಮಸ್ಥರು ಸುಮಾರು 25 ಸಾವಿರ ರವೆ ಉಂಡೆ ತಯಾರಿಸಿ ಭಾನುವಾರ ಮಠಕ್ಕೆ ಕಳುಹಿಸಿದ್ದಾರೆ.

ಪ್ರತಿ ವರ್ಷ ನಮ್ಮ ಗ್ರಾಮದಿಂದ ನಾನಾ ಖಾದ್ಯಗಳನ್ನು ತಯಾರಿಸಿ ಗವಿಸಿದ್ದೇಶ್ವರ ಮಠಕ್ಕೆ ಅರ್ಪಣೆ ಮಾಡುತ್ತಿದ್ದೇವೆ. ಮೂರು ಕ್ವಿಂಟಾಲ್ ರವೆ ಉಂಡೆ ಮಾಡಿದ್ದು, ಇದಕ್ಕೆ ಒಂದೂವರೆ ಕ್ವಿಂಟಾಲ್ ರವೆ, ಒಂದೂವರೆ ಕ್ವಿಂಟಾಲ್ ಸಕ್ಕರೆ, 15 ಕೆ.ಜಿ ತುಪ್ಪ, 5 ಕೆ.ಜಿ ದ್ರಾಕ್ಷಿ ಬಳಸಲಾಗಿದೆ. ಇದರ ಜತೆ 1 ಕ್ವಿಂಟಾಲ್ ಮಾದಲಿ ಹಾಗೂ ಒಂದು ಸಾವಿರಕ್ಕೂ ಹೆಚ್ಚು ರೊಟ್ಟಿಯನ್ನು ದಾ‌ಸೋಹಕ್ಕೆ ನೀಡಿದ್ದೇವೆ ಎಂದು ಬೆಟಗೇರಿ ಗ್ರಾಮಸ್ಥರು ತಿಳಿಸಿದ್ದಾರೆ. 

ಅಳವಂಡಿ ಸಮೀಪದ ಬೆಟಗೇರಿ ಗ್ರಾಮದ ಮ‌ಹಿಳೆಯರು ರವೆ ಉಂಡಿ ತಯಾರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT