
ಕುಕನೂರಿನ ಅಂಬೇಡ್ಕರ್ ವೃತ್ತದಲ್ಲಿ ಡಾ. ಬಿ. ಆರ್ ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನ ಆಚರಿಸಲಾಯಿತು
ಕುಕನೂರು: ಪಟ್ಟಣದಲ್ಲಿ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನ ಆಚರಿಸಲಾಯಿತು.
ತಹಶೀಲ್ದಾರ ಪ್ರಾಣೇಶ ಎಚ್ ಮಾತನಾಡಿ, ಅಂಬೇಡ್ಕರ್ ಅವರು ಒಬ್ಬ ಮಹಾನ್ ಮಾನವತವಾದಿ. ಸಮಾನತೆ ಸಾರಿದ ಮಹಾನ್ ಸಂತ. ದೇಶಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಲ್ಪಿಸಿ ಪ್ರಜೆಗಳನ್ನೇ ಪ್ರಭುಗಳನ್ನಾಗಿ ಮಾಡಿದ ಮಹಾನ್ ಚೇತನ ಎಂದರು.
ದೇಶಕ್ಕೆ ಅಮೂಲ್ಯವಾದ ಸಂವಿಧಾನ ನೀಡಿರುವ ಡಾ. ಅಂಬೇಡ್ಕರ್ ಅವರು ಭಾರತೀಯರ ಮನದಲ್ಲಿ ಸದಾ ಸ್ಮರಣೀಯವಾಗಿದ್ದಾರೆ ಎಂದರು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಪರಶುರಾಮ ಆರಬೆರಳಿನ್, ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಅಧಿಕ್ಷಕ ವಿಜಯ್ ಕುಮಾರ, ಲಕ್ಷ್ಮಣ ಕಾಳಿ, ಲೋಕಪ್ಪ ನಾರಾಯಣಕರ್, ಹನುಮಂತ ಆರಬೆರಳಿನ್, ನಿಂಗಪ್ಪ ಗೊರ್ಲೆಕೊಪ್ಪ, ನಾಗಪ್ಪ ಕಲ್ಮನಿ, ಶರಣಪ್ಪ ಕಾಳಿ, ಪಕ್ಕಪ್ಪ ಸಾಲ್ಮನಿ, ಜುಂಜಪ್ಪ ಸಾಲ್ಮನಿ, ಮಾರುತಿ ಜೀವಣ್ಣವರ್, ನಾಗಪ್ಪ ಸೋಂಪುರ, ರಮೇಶ ಗಜಕೋಶ, ರಾಮಣ್ಣ ಬಂಕದಮನಿ, ಬಾಲರಾಜ ಗಾಳಿ, ಮಲ್ಲು ಚೌದ್ರಿ,ಬಸವರಾಜ್ ಸೆಲೂಡಿ, ರಮೇಶ ಮಾಳೆಕೊಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.