ADVERTISEMENT

ಅಮೆರಿಕ ರಾಯಭಾರಿ ಭೇಟಿ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2019, 10:06 IST
Last Updated 30 ಡಿಸೆಂಬರ್ 2019, 10:06 IST
ಗಂಗಾವತಿ ತಾಲ್ಲೂಕಿನ ಆನೆಗೊಂದಿ ಗ್ರಾಮದ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಅಮೆರಿಕ ರಾಯಭಾರಿ ಕೆನ್ಜಸ್ಟರ್ ಭಾನುವಾರ ಭೇಟಿ ನೀಡಿದರು
ಗಂಗಾವತಿ ತಾಲ್ಲೂಕಿನ ಆನೆಗೊಂದಿ ಗ್ರಾಮದ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಅಮೆರಿಕ ರಾಯಭಾರಿ ಕೆನ್ಜಸ್ಟರ್ ಭಾನುವಾರ ಭೇಟಿ ನೀಡಿದರು   

ಗಂಗಾವತಿ: ವಿಜಯನಗರದ ಕಾಲದ ಐತಿಹಾಸಿಕ ಸ್ಥಳವಾದ ತಾಲ್ಲೂಕಿನ ಆನೆಗೊಂದಿ ಗ್ರಾಮಕ್ಕೆ ಅಮೆರಿಕ ರಾಯಭಾರಿ ಕೆನ್ ಜಸ್ಟರ್ ಭಾನುವಾರ ಭೇಟಿ ನೀಡಿದರು.

ಐತಿಹಾಸಿಕಹಿನ್ನೆಲೆ ಹೊಂದಿರುವ ಆನೆಗೊಂದಿಯ ರಂಗನಾಥ ದೇವಸ್ಥಾನ, ಗಗನ ಮಹಲ್, ನವವೃಂದಾವನ, ಪಂಪಾಸರೋವರ, ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ, ಇತಿಹಾಸವನ್ನು ತಿಳಿದುಕೊಂಡರು.

ವಿಶ್ವದ ಐತಿಹಾಸಿಕ ಸ್ಥಳಗಳಲ್ಲಿ ಪ್ರಮುಖವಾಗಿ ಆನೆಗೊಂದಿ ಹಾಗೂ ಹಂಪಿಯನ್ನು ನೋಡಬೇಕು. ಅಲ್ಲದೆ ರಾಮಾಯಣದ ಕುರುವುಗಳನ್ನು ಇಲ್ಲಿ ಕಾಣಬಹುದು. ಇದೊಂದು ಸುಂದರ ಸ್ಥಳ. ಇದಕ್ಕೆ ಐತಿಹಾಸಿಕ ಮಹತ್ವ ಇದೆ ಅವರು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ADVERTISEMENT

ಈ ಸಂದರ್ಭದಲ್ಲಿ ಆನೆಗೊಂದಿಯ ರಾಜವಂಶಸ್ಥರಾದ ಶ್ರೀಕೃಷ್ಣದೇವರಾಯಲು ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.