ADVERTISEMENT

ಕೊಪ್ಪಳ: ಬಲ್ಡೋಟಾ ಕಾರ್ಖಾನೆ ಆವರಣದಲ್ಲಿ ಜಾನುವಾರು ನುಗ್ಗಿಸಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 12:45 IST
Last Updated 23 ಜುಲೈ 2025, 12:45 IST
   

ಕೊಪ್ಪಳ: ಜಿಲ್ಲಾಕೇಂದ್ರದ ಸಮೀಪದಲ್ಲಿ ಉಕ್ಕಿನ ಕಾರ್ಖಾನೆ ಸ್ಥಾಪಿಸಲು ಬಲ್ಡೋಟಾ ಕಂಪನಿ ಪಡೆದುಕೊಂಡಿರುವ ಜಾಗದ ವ್ಯಾಪ್ತಿಯಲ್ಲಿ ಸಾರ್ವಜನಿಕರ ಬಳಕೆಗೆ ಮೀಸಲಾದ ಬಸಾಪುರ ಕೆರೆಯಿದ್ದು, ಇದನ್ನು ಜಾನುವಾರುಗಳಿಗೆ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಸಂಘಟನೆಗಳು ಬುಧವಾರ ಪ್ರತಿಭಟನೆ ನಡೆಸಿದವು.

ಮೊದಲು ಜಿಲ್ಲಾಡಳಿತ ಭವನದ ಮುಂದೆ ಜಾನುವಾರುಗಳನ್ನು ತಂದು ಪ್ರತಿಭಟಿಸಿ ಒಳಗೆ ನುಗ್ಗಿಸಲು ಮಾಡಿದ ಪ್ರಯತ್ನಕ್ಕೆ ಪೊಲೀಸರು ತಡೆಯೊಡ್ಡಿದರು. ಬಳಿಕ ಕಾರ್ಖಾನೆ ಜಾಗದ ಬಳಿ ತೆರಳಿ ಅಲ್ಲಿ ಮೇಕೆ ಹಾಗೂ ಆಡುಗಳನ್ನು ಒಳಗೆ ನುಗ್ಗಿಸಿ ಕೆರೆ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದರು. ಆಗ ಕಾರ್ಖಾನೆಯ ಭದ್ರತಾ ಸಿಬ್ಬಂದಿ, ಜಾನುವಾರುಗಳ ಮಾಲೀಕರ ನಡುವೆ ಮಾತಿನ ಚಕಮಕಿ ನಡೆಯಿತು.

‘ಬಸಾಪುರ ಹತ್ತಿರ ಸರ್ವೆ ಸಂಖ್ಯೆ 143ರಲ್ಲಿ 44.35 ಎಕರೆಯ ಸಾರ್ವಜನಿಕ ಕೆರೆ ಅತಿಕ್ರಮಿಸಿಕೊಂಡು ಬಲ್ಡೋಟಾ ಕಾಂಪೌಂಡ್‌ ನಿರ್ಮಿಸಿಕೊಂಡಿದ್ದಕ್ಕೆ ವಿರೋಧವಿದೆ’ ಎಂದು ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.