ಗಂಗಾವತಿ: ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಇಲೆಕ್ಟ್ರಿಷಿಯನ್, ಮೆಕ್ಯಾನಿಕಲ್ ಮೋಟಾರ್ ವೆಹಿಕಲ್, ಟರ್ನರ್, ಫಿಟ್ಟರ್, ವೆಲ್ಡರ್ ಅತಿಥಿ ಬೋಧಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಎಲೆಕ್ಟ್ರೀಷಿಯನ್ ಹುದ್ದೆಗೆ ಐಟಿಐ, ಎಟಿಎಸ್, ಡಿಇಇ ಅಥವಾ ಬಿಇ ಇಲೆಕ್ಟ್ರಿಷಿಯನ್ ವಿದ್ಯಾರ್ಹತೆ ಹೊಂದಿ ಬೇಕು. ಫಿಟ್ಟರ್ ಹುದ್ದೆಗೆ ಐಟಿಐ, ಎಟಿಎಸ್, ಡಿಎಂಇ ಅಥವಾ ಬಿಇ(ಮೆಕ್ಯಾನಿಕಲ್) ವಿದ್ಯಾರ್ಹತೆ ಹೊಂದಿರಬೇಕು.
ಆಸಕ್ತ ಅಭ್ಯರ್ಥಿಗಳು ಖುದ್ದಾಗಿ ಅಥವಾ ಅಂಚೆ ಮೂಲಕ ಆ.11ರ ಸಂಜೆ 5 ಗಂಟೆ ಒಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಮೊ. ಸಂ. 9448259832 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.