ADVERTISEMENT

ಕುಷ್ಟಗಿ| ಬೈಕ್‌ ಮಗುಚಿ ಕೆಡಿಪಿ ಸದಸ್ಯ ಸಾವು

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 6:03 IST
Last Updated 11 ಜನವರಿ 2026, 6:03 IST
ಸಿದ್ದನಗೌಡ
ಸಿದ್ದನಗೌಡ   

ಕುಷ್ಟಗಿ: ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಬೆಳಿಗ್ಗೆ ಬೈಕ್‌ ಮಗುಚಿ ಗಾಯಗೊಂಡಿದ್ದ ಪಟ್ಟಣದ ನಿವಾಸಿ ಹಾಗೂ ತ್ರೈಮಾಸಿಕ ಕೆಡಿಪಿ ಸದಸ್ಯ ಸಿದ್ದನಗೌಡ ದೊಡ್ಡನಗೌಡ ಪಾಟೀಲ (50) ಮೃತಪಟ್ಟಿದ್ದಾರೆ. 

ಹಂದಿ ಅಡ್ಡಬಂದಿದ್ದರಿಂದ ಬೈಕ್‌ ಮಗುಚಿ ಬಿದ್ದಿತ್ತು. ಈ ಕುರಿತ ಪ್ರಕರಣ ಇಲ್ಲಿಯ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

ಮೃತರಿಗೆ ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಸ್ವಗ್ರಾಮ ತಳುವಗೇರಾದಲ್ಲಿ ಶನಿವಾರ ಸಂಜೆ ಅಂತ್ಯಕ್ರಿಯೆ ನಡೆಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.