
ಕನಕಗಿರಿ (ಕೊಪ್ಪಳ ಜಿಲ್ಲೆ): ಶಾಲಾ ದಾಖಲಾತಿಗಳನ್ನು ಝರಾಕ್ಸ್ ಮಾಡಿಸಿಕೊಂಡು ವಾಪಸ್ ಊರಿಗೆ ಬರುತ್ತಿರುವ ವೇಳೆ ಟ್ರ್ಯಾಕ್ಟರ್ ಚಾಲಕನ ಅಜಾಗೂರೂಕತೆಯಿಂದ ಶಾಲಾ ಬಾಲಕನೊಬ್ಬ ಗುರುವಾರ ಮೃತಪಟ್ಟದ್ದಾನೆ. ತಾಲ್ಲೂಕಿನ ಕ್ಯಾರಿಹಾಳ ಗ್ರಾಮದ ಮನೋಜ ಹನುಮಂತ ಸಾಣಾಪುರ (14) ಎಂದು ಮೃತ ವಿದ್ಯಾರ್ಥಿ.
ಮನೋಜ ಹಾಗೂ ಯಮನೂರ ಸಾಣಾಪುರ ಎಂಬುವರು ದ್ವಿಚಕ್ರ ವಾಹನದಲ್ಲಿ ನವಲಿಗೆ ಹೋಗಿ ಶಾಲಾ ದಾಖಲಾತಿಗಳನ್ನು ಝರಾಕ್ಸ್ ಮಾಡಿಸಿಕೊಂಡು ತಾವರಗೇರಾ- ನವಲಿ ರಸ್ತೆಯ ಮೂಲಕ ಕ್ಯಾರಿಹಾಳಗೆ ಬರುವ ಸಮಯದಲ್ಲಿ ಈ ಅವಘಡ ನಡೆದಿದೆ.
ಟ್ರ್ಯಾಕ್ಟರ್ ಚಾಲಕ ಶರಣಪ್ಪ ಉದ್ಯಾಳ ಮರಂ ತುಂಬಿದ ಟ್ರಾಲಿಯೊಂದಿಗೆ ರಿವರ್ಸ್ ತೆಗೆಯುವಾಗ ಹಿಂದುಗಡೆ ನಿಂತಿದ್ದ ವ್ಯಕ್ತಿಗಳನ್ನು ನೋಡದೆ ವೇಗವಾಗಿ ಹೋಗಿದ್ದರಿಂದ ಬಾಲಕ ಮೃತಪಟ್ಟಿದ್ದಾನೆ. ಯಮನೂರನಿಗೆ ತೆರಚಿದ ಗಾಯಗಳಾಗಿವೆ ಎಂದು ಪಿಐ ಎಂ.ಡಿ.ಫೈಜುಲ್ಲಾ ತಿಳಿಸಿದ್ದಾರೆ.
ಮೃತನ ತಂದೆ ಹನುಮಂತ ಸಾಣಫುರ ನೀಡಿದ ದೂರಿನ ಪ್ರಕಾರ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.