
ಕಾರಟಗಿ: ಚನ್ನಳ್ಳಿ ಗ್ರಾಮದಲ್ಲಿ ಎರಡು ವರ್ಷಗಳ ಬಳಿಕ ಗ್ರಾಮ ದೇವತೆ ಮಾರಿಕಾಂಬ ದೇವಿ ಮತ್ತು ದ್ಯಾವಮ್ಮ ದೇವಿಯ ಜಾತ್ರೆ ಶುಕ್ರವಾರ ಅದ್ದೂರಿಯಾಗಿ ನಡೆಯಿತು. ಸ್ಥಗಿತಗೊಂಡಿದ್ದ ಜಾತ್ರೆಗೆ ಗ್ರಾಮಸ್ಥರು ಒಗ್ಗೂಡಿ ಯಶಸ್ವಿ ಜಾತ್ರೆಗೆ ನಾಂದಿ ಹಾಡಿದರು.
ಗ್ರಾಮದ ಎಲ್ಲಾ ದಿಕ್ಕುಗಳ ಸೀಮಾ ಭಾಗದಲ್ಲಿ ಹಾಲಿನ ಅಭಿಷೇಕ ಮೂಲಕ ಗ್ರಾಮದಲ್ಲಿ ವಿಧಿ, ವಿಧಾನದೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು 3 ದಿನಗಳಿಂದ ಶ್ರದ್ದಾ, ಭಕ್ತಿಯೊಂದಿಗೆ ಆಚರಿಸಿದರು. ಎಲ್ಲಾ ಸೀಮಾಗಳ ದಾರಿಯನ್ನು ಬಂದ್ ಮಾಡಲಾಗಿತ್ತು.
ಶುಕ್ರವಾರ ಗ್ರಾಮದ ಪ್ರತಿ ಮನೆಯವರು ಮಾರಿಕಾಂಬ ದೇವಿ ಮತ್ತು ದ್ಯಾವಮ್ಮ ದೇವಿಯ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿ, ಎಡೆ ಹಾಗೂ ಭಕ್ತಿಯನ್ನು ಸಮರ್ಪಿಸಿದರು. ಇಡೀ ಗ್ರಾಮವೇ ಸಂಭ್ರಮದಲ್ಲಿ ಭಾಗಿಯಾಗಿತ್ತು.
ಸುತ್ತಲಿನ ಅನೇಕ ಗ್ರಾಮಗಳ ಭಕ್ತರು ಕುಟುಂಬ ಪರಿವಾರದೊಂದಿಗೆ ಆಗಮಿಸಿ ದರ್ಶನ ಮಾಡಿ, ಧನ್ಯತಾಭಾವ ಮೆರೆದರು.
ಜಾತಿ, ಮತದ ಬೇಧವಿಲ್ಲದೇ ಸರ್ವರೂ ಗ್ರಾಮ ದೇವತೆಯ ಜಾತ್ರೆಯಲ್ಲಿ ಪಾಲ್ಗೊಂದ್ದು ವಿಶೇಷವಾಗಿತ್ತು. ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಮಾಡಲಾಗಿತ್ತು.
ಗ್ರಾಮದ ಹಿರಿಯರಾದ ಲಚನಪ್ಪ ದಳಪತಿ, ದಶರಥರೆಡ್ಡಿ, ಪಾಲಾಕ್ಷರೆಡ್ಡಿ, ವಿರುಪಣ್ಣ, ವಿರುಪಣ್ಣ ಮಾಸ್ಟರ, ಮೌಲಪ್ಪ, ವೀರೇಶ, ಶರಣಪ್ಪ, ಈರಪ್ಪ, ಮುದಿಯಪ್ಪ ತಳವಾರ. ಭೀಮಪ್ಪ ಬೂದಗುಂಪ , ವೀರೇಶಪ್ಪ ಪೂಜಾರಿ, ಬಸಪ್ಪ ಮೂಲಿಮನೆ, ಅಂಬಣ್ಣ ಹೊಸಮನಿ, ತಿಪ್ಪಣ್ಣ, ಬಿ. ಶರಣಬಸವ, ಮಲ್ಲೇಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.